ಎಡಬಿಡಂಗಿ ಅಮರ್ ಸಿಂಗ್ ತಿಹಾರ್ ಜೈಲಿನಲ್ಲಿ ಏಕಾಂಗಿ

ಮಂಗಳವಾರ ಜೈಲು ಸೇರಿದ ಅಮರ್ ಸಿಂಗ್‌ಗೆ ಕಿಡ್ನಿ ಸಮಸ್ಯೆ ಸೇರಿದಂತೆ ಅನಾರೋಗ್ಯ ತೀವ್ರವಾಘಿ ಬಾಧಿಸುತ್ತಿದೆ. ಅನಿವಾರ್ಯವಾಗಿ ಕೋಣೆಯಲ್ಲೇ ವಿಶ್ರಾಂತಿ ಪಡೆಯಬೇಕಿದೆ. ಕೊಠಡಿಯಲ್ಲೇ ಆಗಾಗ್ಗೆ ವಾಕಿಂಗು.
ಜೈಲಿನ ವೈದ್ಯರು ನಿಯಮಿತವಾಗಿ ಅಮರ್ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ. ಅಮರ್ ಪಕ್ಕದ ಸೆಲ್‌ನಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಡಾ ಇದ್ದಾರೆ.
ಅಮರ್ ಸಿಂಗ್‌ಗೆ ದಾಲ್, ಚಪಾತಿ, ಸಬ್ಜಿ ಹಾಗೂ ಅನ್ನ ನೀಡಲಾಗುತ್ತಿದೆ. ಅವರಿರುವ ಕೋಣೆಗೆ ಹವಾನಿಯಂತ್ರಿತ ವ್ಯವಸ್ಥೆಯಿಲ್ಲ. ಫ್ಯಾನ್ ಮಾತ್ರ ಇದೆ. ಪುಟ್ಟದೊಂದು ಟೀವಿ ಕೂಡ ಇದೆ. ಕೋಣೆಯೊಳಗೇ ಸ್ನಾನಗೃಹ, ಶೌಚಾಲಯವಿದೆ. ಅಮರ್ ಸಿಂಗ್ ಇದುವರೆಗೂ ವಿಶೇಷ ಸೌಲಭ್ಯಗಳನ್ನು ಕೇಳಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.











Click it and Unblock the Notifications