ನವದೆಹಲಿ, ಸೆ.7: ಇಂದು ಬೆಳಗ್ಗೆ 10.15ರಲ್ಲಿ ಸಂಭವಿಸಿದ ಸ್ಫೋಟವು ಹರ್ಕತ್ ಉಲ್ ಮುಜಾಹಿದ್ದೀನ್ ಸಂಘಟನೆಯ ಹರಕತ್ ಆಗಿದೆ. ರಾಷ್ಟ್ರೀಯ ನ್ಯೂಸ್ ಚಾನೆಲ್ಲಿಗೆ ಜಿ-ಮೇಲ್ ಮೂಲಕ ಪತ್ರ ಕಳಿಸಿದ್ದು, ಸ್ಫೋಟಕ್ಕೆ ಹುಜಿ ಹೊಣೆ ಹೊತ್ತಿದೆ.
ದೆಹಲಿ ಹೈಕೋರ್ಟ್ ನ ಗೇಟ್ ಸಂಖ್ಯೆ 5 ರ ಬಳಿ ತಾನೇ ಬಾಂಬ್ ಸ್ಫೋಟಿಸಿದ್ದಾಗಿ ಹರ್ಕತ್ ಉಲ್ ಜೆಹಾದಿ (Harkat-ul-Jihad-al-Islami -HuJI ) ಉಗ್ರವಾದಿ ಸಂಘಟನೆಯು ಖಾಸಗಿ ಚಾನೆಲ್ಲಿಗೆ ಈಮೇಲ್ ಮೂಲಕ ತಿಳಿಸಿದೆ.