ಕೋರ್ಟುಗಳ ಗಮನ ಬೇರೆಡೆ ಸೆಳೆಯುವ ತಂತ್ರವಾ?

ಇತ್ತೀಚೆಗೆ ಕೋರ್ಟುಗಳು ಒಂದೇ ಸಮನೆ ರಾಜಕಾರಣಿಗಳ ಮೇಲೆ ಮುರುಕೊಂಡು ಬೀಳುತ್ತಿವೆ. ಕೋರ್ಟ್ ಆಕ್ಟಿವಿಸಂನ್ನು ಹತ್ತಿಕ್ಕಲು ನಮ್ಮವರೇ ನಡೆಸಿದಾ ಕುಕೃತ್ಯವಾ ಇದು? ನಮ್ಮ ನಡುವೆಯೇ ಭಯ ಉತ್ಪಾದಿಸುವಾ ಭಯೋತ್ಪಾದನಾ ಕೃತ್ಯವಾ ಇದು.
ಸತತವಾಗಿ ನ್ಯಾಯಾಲಯಗಳಲ್ಲಿ ರಾಜಕಾರಣಿಗಳು, ಅಧಿಕಾಸ್ಥರ ವಿರುದ್ಧ ವಿಚಾಣೆಗಳು ನಡೆಯುತ್ತಿದ್ದು, ಸಾಲುಸಾಲಾಗಿ ಜೈಲು ಪಾಲಾಗುತ್ತಿದ್ದಾರೆ. ಈ ಹಂತದಲ್ಲಿ ಕೋರ್ಟುಗಳ ಬಾಯಿಮುಚ್ಚಿಸುವ ವಿಫಲ ಪ್ರಯತ್ನ ಇದಾಗಿದೆಯಾ ಎಂಬ ಪ್ರಶ್ನೆ ಎದ್ದಿದೆ.
ರಾಷ್ಟ್ರದ ರಾಜಧಾನಿಯಲ್ಲಿ ಪ್ರಮುಖ ಕೋರ್ಟಿನ ಮೇಲೆ ಇಂತಹ ಸ್ಫೋಟ ನಡೆಸಿದರೆ ಸುಮ್ಮನಾಗುತ್ತಾರೆ ಎಂಬ ಎಣಿಕೆಯಾ? ಇದಕ್ಕೆ ಸರಕಾರ ಮತ್ತು ಪೊಲೀಸರಿಗಿಂತ ಹೆಚ್ಚಾಗಿ ಕೋರ್ಟುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications