ಅಶ್ಲೀಲ ವರ್ತನೆ : ಬಳ್ಳಾರಿ ಪ್ರವಾಸಿಗರ ಬಂಧನ

ಬಳ್ಳಾರಿಯಿಂದ ದೇವಸ್ಥಾನಗಳ ವೀಕ್ಷಣೆಗೆಂದು ಬಂದಿದ್ದ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವ ಕುಳಗಳು ಗುಡಿಗೆ ಹೋಗದೆ ರೆಸಾರ್ಟಿಗೆ ಹೋಗಿದ್ದಾರೆ. ಅಲ್ಲಿ ಕುಡಿದ ಮತ್ತಿನಲ್ಲಿ ಅಸಹ್ಯಕರ ಬಟ್ಟೆ ಧರಿಸಿ ಅಸಭ್ಯ ರೀತಿಯಲ್ಲಿ ನರ್ತಿಸುತ್ತಿದ್ದರು. ಇಂತಹ ಚಟುವಟಿಕೆಯ ಸುದ್ದಿ ತಿಳಿದ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿದ್ದಾರೆ.
ಪ್ರವಾಸಿಗರ ಸುತ್ತ ಮುಂಬೈ, ದೆಹಲಿ, ಗ್ವಾಲಿಯರ್ ನಿಂದ ಹಣ ನೀಡಿ ಕರೆಸಲಾಗಿದ್ದ ಮಹಿಳೆಯರು ಅಶ್ಲೀಲ ಬಟ್ಟೆ ಧರಿಸಿ ಕುಣಿಯುತ್ತಿದ್ದರು. ಅವರ ಮೇಲೆ ಗ್ರಾಹಕರು ಹಣ ಎಸೆಯುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಅವಕಾಶ ನೀಡಿದ್ದ ರೆಸಾರ್ಟ್ ಮ್ಯಾನೇಜರ್ ಸೇರಿದಂತೆ ಐವರನ್ನೂ ಪೊಲೀಸರು ಬಂಧಿಸಿದ್ದಾರೆ.
ತುರ್ಕಪಲ್ಲಿ ಎಂಬಲ್ಲಿರುವ ಡಾರ್ಲಿಂಗ್ ಕೇವ್ ರೆಸಾರ್ಟಲ್ಲಿ ಈ ಘಟನೆ ನಡೆದಿದೆ. ರೆಸಾರ್ಟಿನಿಂದ 3.3 ಲಕ್ಷ ರು., 32 ಮೊಬೈಲ್ ಮತ್ತು ಬೀರ್ ಬಾಟಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲ 28 ಜನರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications