ವೋಟಿಗಾಗಿ ನೋಟು: ಜೈಲು ಪಾಲಾದ ಅಮರ್ ಸಿಂಗ್
ನವದೆಹಲಿ,
ಸೆ.6: ರಾಜ್ಯ ಸಭೆ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರನ್ನು 'ವೋಟಿಗಾಗಿ ನೋಟು' ಹಗರಣದಲ್ಲಿ ದೆಹಲಿ ತೀಸ್ ಹಜಾರಿ ಕೋರ್ಟ್ 13 ದಿನಗಳ ನ್ಯಾಯಾಂಗ ಬಂಧನಕ್ಕೆ (ಸೆಪ್ಟೆಂಬರ್ 19ರವರೆಗೆ) ಒಪ್ಪಿಸಿದೆ. id="toptextpromo">ದೆಹಲಿಯ
ಕ್ರೈಂ ಬ್ರ್ಯಾಂಚ್ ಪೊಲೀಸರು ಅಮರ್ ಸಿಂಗ್ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು. ಈ ಸಂಬಂಧ ಕೋರ್ಟ್ ಇಬ್ಬರಿಗೂ ಸಮನ್ಸ್ ಜಾರಿ ಮಾಡಿತ್ತು. ಪ್ರಕರಣದ ಇತರೆ ಮೂವರು ಆರೋಪಿಗಳಾದ ಫಗ್ಗನ್ ಸಿಂಗ್ ಕುಲಸ್ತೆ, ಮಹಾವೀರ್ ಸಿಂಗ್ (ಇಬ್ಬರೂ ಬಿಜೆಪಿ ಮಾಜಿ ಸಂಸದರು) ಮತ್ತು ಬಿಜೆಪಿಯ ಹಾಲಿ ಸಂಸದ ಅಶೋಕ್ ಅರ್ಗಲ್ ಅವರಿಗೂ ಸೆಪ್ಟೆಂಬರ್ 19ರವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ನಟ
ಅಮಿತಾಬ್ ಬಚ್ಚನ್ ಅವರ ಪುರಾತನ ಮಿತ್ರ ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲವಾದರೂ ಮಧ್ಯಾಹ್ನದ ವೇಳೆಗೆ ಹಾಜರಾಗುತ್ತಿದ್ದಂತೆ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ತಕ್ಷಣ ಪೊಲೀಸರು ಅವರನ್ನು ನ್ಯಾಯಾಂಗ ವಶಕ್ಕೆ ತೆಗೆದುಕೊಂಡರು.











Click it and Unblock the Notifications