ಯಡ್ಡಿ ಅವನತಿಗೆ 'ಗೆಳತಿ ಶೋಭಾ' ಕಾರಣ: ವಿಕಿಲೀಕ್ಸ್

ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಮಾಹಿತಿಯನ್ನು ಆಧರಿಸಿ ವಿಕಿಲೀಕ್ಸ್ ಆಗಲೇ ಇದನ್ನು ವರದಿ ಮಾಡಿತ್ತು. ಆದರೆ ವಿಷಯ ತಡವಾಗಿ ಈಗ ಬೆಳಕಿಗೆ ಬಂದಿದೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರಕಾರದ ಯಜಮಾನನಿಗಿಂತಲೂ ಈ 'ಗೆಳತಿ' ಬಹಳಷ್ಟು ಪ್ರಭಾವಿಯಾಗಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಪತ್ನಿಯನ್ನು ಕಳೆದುಕೊಂಡಿದ್ದರು ಎಂಬುದು ಗಮನಾರ್ಹ.
ಅಂದಿನ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರು ಯಡಿಯೂರಪ್ಪನವನ್ನು ಅಧಿಕಾರದಿಂದ ಕೆಳಗಿಳಿಸುವ ಸಾಹಸಕ್ಕೆ ಮುಂದಾಗಿದ್ದರು ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ವಾಷಿಂಗ್ಟನ್ ಗೆ ಕಳಿಸಿದ್ದ ವರದಿಯಲ್ಲಿ ಈ ಬೆಳವಣಿಗೆಗಳನ್ನು ವಿವರಿಸಿದ್ದರು.
ಜನಾ ರೆಡ್ಡಿ ಸಾರ್ವಜನಿಕವಾಗಿಯೇ ಮುಖ್ಯಮಂತ್ರಿಯ ಗೆಳತಿ ಶೋಭಾ ಬಗ್ಗೆ ಕಿಡಿಕಾರಿದ್ದಾರೆ. ವಾಸ್ತವವಾಗಿ, ಗ್ರಾಮೀಣಾಭಿವೃದ್ಧಿ ಸಚಿವೆಯೂ ಆದ ಈ ಗೆಳತಿ ಅಧಿಕಾರವನ್ನು ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಗೆಳತಿ ಶೋಭಾ ಪರ ಭಾರಿ ವಕಾಲತ್ತು ವಹಿಸುತ್ತಾರೆ. ಇದರಿಂದ ಬೇಸತ್ತು ಯಡಿಯೂರಪ್ಪ ಅವರ ಪದಚ್ಯುತಿಗೆ ಯತ್ನಿಸಿದ್ದಾಗಿ ರೆಡ್ಡಿ ಬಹಿರಂಗವಾಗಿಯೇ ಹೇಳಿದ್ದರು ಎಂದು ವಿಕಿಲೀಕ್ಸ್ ವರದಿ ಮಾಡಿತ್ತು.












Click it and Unblock the Notifications