ಅರಮನೆ ಮೈದಾನದಲ್ಲಿ 80 ಕನ್ನಡ ಪುಸ್ತಕ ಮಳಿಗೆ

ಈ ಪ್ರದರ್ಶನದಲ್ಲಿ ಕನ್ನಡವೂ ಸೇರಿದಂತೆ ಸಾವಿರಾರು ಅಪರೂಪದ ಪುಸ್ತಕಗಳಿದ್ದು ಜ್ಞಾನದ ಹೊಸ ಜಗತ್ತೇ ಅಲ್ಲಿ ಅನಾವರಣಗೊಂಡಂತಿದೆ. ಇಲ್ಲಿ ಗ್ರಾಹಕರಿಗೆ ಶೇ. 10 ರಿಂದ 15 ರಷ್ಟು ರಿಯಾಯತಿ ದೊರೆಯಲಿದೆ.
ಸುಮಾರು 240ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಭಾಷೆಯ ಪುಸ್ತಕಗಳು ದೊರೆಯುತ್ತಿದ್ದು ಅವುಗಳಲ್ಲಿ 80 ಮಳಿಗೆಗಳನ್ನು ಕನ್ನಡ ಪುಸ್ತಕಕ್ಕಾಗಿಯೇ ಮೀಸಲಾಗಿಡಲಾಗಿದೆ. ಉಳಿದ 150 ಮಳಿಗೆಗಳಲ್ಲಿ ಇಂಗ್ಲಿಷ್ ಹಾಗೂ ಬೇರೆ ಭಾಷೆಯ ಪುಸ್ತಕಗಳು ಲಭ್ಯವಿದೆ.
ಪ್ರದರ್ಶನದಲ್ಲಿನ ಅಂಕೆಗೌಡ ಪ್ರಕಾಶನ ಮಳಿಗೆಯಲ್ಲಿ ಕ್ರಿ.ಶ. 1800 ರಿಂದ ಇಂದಿನವರೆಗಿನ ಎಲ್ಲಾ ಪುಸ್ತಕಗಳೂ ಲಭ್ಯವಿದೆ. ಇದರಲ್ಲಿ ಹಳಗನ್ನಡ ಸೇರಿದಂತೆ ಪುರಾತನ ಪುಸ್ತಕಗಳೂ ಲಭ್ಯವಿದ್ದು ಆಯಾ ಕಾಲಕ್ಕೆ ತಕ್ಕ ಲಿಪಿಯೂ ಇದರಲ್ಲಿದೆ. ಹಾಗಾಗಿ ಈ ಮಳಿಗೆ ಗ್ರಾಹಕರಿಗೆ ಅತ್ಯಂತ ಅಪರೂಪವೆನಿಸುವ, ಉಪಯುಕ್ತ ಹಾಗೂ ಆಕರ್ಷಣೀಯವಾಗಿದೆ.
ದೇಶದ ಇತಿಹಾಸಕ್ಕೆ ಸಂಬಂಧಿಸಿದ, ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ವೀರರ, ಕನ್ನಡದ ಸಾಹಿತ್ಯ ದಿಗ್ಗಜರ ಶ್ರೇಷ್ಠ ಬರಹಗಳೆಲ್ಲವನ್ನೂ ಒಂದೇ ಸೂರಿನಡಿ ಪಡೆಯುವ ಅವಕಾಶ ಇಲ್ಲುಂಟು. ಕೊಳ್ಳಿ, ಓದಿ, ಓದಿಸಿ.












Click it and Unblock the Notifications