ಯಡಿಯೂರಪ್ಪ, ಮೋದಿಯಪ್ಪ ವ್ಯತ್ಯಾಸ ಇಲ್ಲಪ್ಪ: ಕಾಂಗ್ರೆಸಪ್ಪ

ನರೇಂದ್ರ ಮೋದಿಯನ್ನು ಮೋದಿಯಪ್ಪ ಎಂದು ಕರೆಯುವುದು ಸೂಕ್ತ. ಯಾಕೆಂದರೆ ಇವರ ನಡುವೆ ಯಾವುದೇ ಭಿನ್ನತೆ ವ್ಯತ್ಯಾಸ ಇಲ್ಲವೆಂದು ಕಾಂಗ್ರೆಸ್ ಪಕ್ಷದ ನಾಯಕ ಮೋಹನ್ ಪ್ರಕಾಶ್ ಹೇಳಿಕೆ ನೀಡಿದ್ದಾರೆ.
ಸುಳ್ಳು ಹೇಳೋದರಲ್ಲಿ ಎತ್ತಿದ ಕೈ: ಹೌದು ಯಡಿಯೂರಪ್ಪ ಮತ್ತು ಮೋದಿಯಪ್ಪರಿಬ್ಬರೂ ಸುಳ್ಳು ಹೇಳುವುದರಲ್ಲಿ ನಿಷ್ಣಾತರು ಎಂದು ಕಾಂಗ್ರೆಸ್ ಹೇಳಿದೆ.
ರಾಷ್ಟ್ರಪತಿ ವಾಪಸ್ ಮಾಡಿ: ಇವರಿಬ್ಬರೂ ರಾಷ್ಟ್ರಪತಿಯನ್ನು ವಾಪಸ್ ಕರೆಸಿಕೊಳ್ಳಿ ಅನ್ನುವವರು. ಅಂದು ಯಡಿಯೂರಪ್ಪ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಹೇಳುತ್ತಿದ್ದರು. ಇದೀಗ ಮೋದಿಯಪ್ಪ ಕೂಡ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮೋಹನ್ ಪ್ರಕಾಶ್ ಹೇಳಿದ್ದಾರೆ.
ಎರಡು ನಾಲಗೆ: ಬಿಜೆಪಿ ನಾಯಕರುಗಳು ದೆಹಲಿಗೆ ಸಂಬಂಧಿಸಿದಂತೆ ಹೇಳುವುದು ಒಂದು, ರಾಜ್ಯಗಳಿಗೆ ಸಂಬಂಧಿಸಿದಂತೆ ಹೇಳುವುದು ಇನ್ನೊಂದು ಎನ್ನುವುದು ಕಾಂಗ್ರೆಸ್ ಆರೋಪ. ಒಟ್ಟಾರೆ ಯಡಿಯೂರಪ್ಪಗೂ, ಮೋದಿಯಪ್ಪಗೂ ಯಾವುದೇ ವ್ಯತ್ಯಾಸವಿಲ್ಲವೆಂದು ಕಾಂಗ್ರೆಸ್ ಬೊಬ್ಬೆ ಹೊಡೆಯಲು ಆರಂಭಿಸಿದೆ. ಇತ್ತ ಈ ಹೇಳಿಕೆ ವಿರೋಧಿಸಿ ಬಿಜೆಪಿ ಪಾಳಯಕ್ಕೆ ಮೋದಿಯನ್ನು ಹೊಗಳುವಂತ್ತಿಲ್ಲ, ಯಡಿಯೂರಪ್ಪರನ್ನು ಟೀಕಿಸುವಂತ್ತಿಲ್ಲ. ಇಲ್ಲ ಇವರಿಬ್ಬರ ನಡುವೆ ವ್ಯತ್ಯಾಸಗಳಿವೆ ಅಂತ ಹೇಳುವಂತೆಯೂ ಇಲ್ಲ.












Click it and Unblock the Notifications