ಎಸ್ಎಂ ಕೃಷ್ಣ ಒಟ್ಟು ಆಸ್ತಿ 22 ಲಕ್ಷ ರೂಪಾಯಿಗಳು

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ತಮ್ಮ ಆಸ್ತಿಯನ್ನು ಶನಿವಾರ ಘೋಷಿಸಿಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಎಸ್ಎಂ ಕೃಷ್ಣ ಅವರ ಆಸ್ತಿ ಕೆಲವೇ ಲಕ್ಷ ರು.ನಲ್ಲಿದೆ
ಮಾಜಿ ಮುಖ್ಯಮಂತ್ರಿ, ಕರ್ನಾಟಕದ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರ ಸ್ಥಿರ ಆಸ್ತಿ ಮೊತ್ತ 2.34 ಲಕ್ಷ ರು. ಆಗಿದೆ. ಚರ ಸೊತ್ತಿನ ಮೊತ್ತ 4.89 ಲಕ್ಷ ರುಪಾಯಿ. ಅವರು ಸುಮಾರು 3 ಲಕ್ಷ ರುಪಾಯಿಯನ್ನು ವಿವಿಧ ಕಡೆ ಹೂಡಿಕೆ ಮಾಡಿದ್ದಾರೆ. ಅವರ ಉಳಿತಾಯ ಖಾತೆಯಲ್ಲಿ 12 ಲಕ್ಷ ರುಪಾಯಿ ಇದೆ. ಅವರ ಪತ್ನಿಯ ಬಳಿ ಸುಮಾರು 21 ಲಕ್ಷ ರು. ಮೊತ್ತದ ಆಸ್ತಿಯಿದೆ.
ಹೀಗಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ದುಡ್ಡು ಹೊಂದಿರುವರಾಗಿ ಎಸ್ಎಂ ಕೃಷ್ಣ ಹೊರಹೊಮ್ಮಿದ್ದಾರೆ. ಹಾಗಾದರೆ ಕರೋಡ್ ಪತಿ ಮಂತ್ರಿಗಳ್ಯಾರು? ಹಿಂದಿನಪುಟ ನೋಡಿ!












Click it and Unblock the Notifications