Get Updates
Get notified of breaking news, exclusive insights, and must-see stories!

ಸುಪಾರಿ ಕೊಟ್ಟು ಹೆತ್ತ ಮಗನನ್ನು ಮುಗಿಸಿದ ತಾಯಿ

Mother gets son killed
ಮುಂಬೈ, ಸೆ 03: ಇಷ್ಟು ದಿನ ಕದ್ದುಮುಚ್ಚಿ ನಡೆಸುತ್ತಿದ್ದ ವಿವಾಹೇತರ ಸಂಬಂಧ ಮಗನಿಗೆ ತಿಳಿದುಬಿಟ್ಟಿದೆ. ಇದಕ್ಕಾಗಿ ಮಗನಿಂದಲೇ ಉಗಿಸಿಕೊಂಡಿದ್ದಾಳೆ. ಬೇಡಮ್ಮ ಇದು ಒಳ್ಳೆಯದಲ್ಲ ಅಂತ ಮಗನಿಂದಲೇ ಬುದ್ದಿ ಮಾತು ಹೇಳಿಸಿಕೊಂಡಿದ್ದಾಳೆ. ಅವಳು ಇಷ್ಟೆಲ್ಲ ನಡೆದ ಮೇಲಾದರೂ ವಿವಾಹೇತರ ಸಂಬಂಧ ಬಿಟ್ಟುಬಿಡಬಹುದಿತ್ತು.

ಆದರೆ ಕಾಮಾಂಧ ಕಣ್ಣಿಗೆ ಮಗನೇ ವಿಲನ್ ಆಗಿ ಕಂಡಿದ್ದಾನೆ. ತನ್ನ ವಿವಾಹೇತರ ಸಂಬಂಧದ ರಹಸ್ಯ ತಿಳಿದ ಮಗನನ್ನೇ ಮುಗಿಸಲು ಇಬ್ಬರು ಹಂತಕರಿಗೆ ಸುಪಾರಿ ನೀಡಿದ ಕಿರಾತಕಿ ಮಹಾತಾಯಿ(?)ಯೊಬ್ಬಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಅಮ್ಮನ ಕಾಮಾಂಧ ಬದುಕಿಗೆ ಬಲಿಯಾದ ಮಗನ ಹೆಸರು ಮಂಜೀತ್(22). ಆತನನ್ನು ದೆಹಲಿಯ ನಜಾಫ್ ಗರ್ ನಿವಾಸದಿಂದ ಕಿಡ್ನಾಪ್ ಮಾಡಿದ ಸುಪಾರಿ ಹಂತಕರು ಪಂಜಾಬಿನ ಸಂಗೂರ್ ಜಿಲ್ಲೆಯಲ್ಲಿ ಕಳೆದ ಜನವರಿಯಲ್ಲಿ ಕೊಲೆ ಮಾಡಿದ್ದರು.

ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಹಂತಕರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆಗ ಈ ಘಟನೆಯೂ ಬೆಳಕಿಗೆ ಬಂದಿದೆ. ಆ ಮಹಾತಾಯಿಯ ಹೆಸರು ರಾಜೀಸ್ ಅಲಿಯಾಸ್ ಲಾಲ್ಲಿ(45). ಆಕೆಯನ್ನು ಆಗಸ್ಟ್ 31ಕ್ಕೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

"ತಾಯಿಯ ವಿವಾಹೇತರ ಸಂಬಂಧ ಮಗನಿಗೆ ತಿಳಿದಾಗ, ಇದನ್ನು ಮುಂದುವರೆಸದಂತೆ ಎಚ್ಚರಿಸಿದ್ದ. ಅದೇ ಆತನ ಪ್ರಾಣಕ್ಕೆ ಮುಳುವಾಯಿತು. ಮಗನ ವಿರೋಧ ಮತ್ತು ಅಪಾದನೆಯಿಂದ ರೊಚ್ಚಿಗೆದ್ದ ಈಕೆ ಕಿರಾತಕಿಯಾಗಿ ಹಂತಕರಿಗೆ 2 ಲಕ್ಷ ರು. ನೀಡಿ ಮಗನನ್ನೇ ಮುಗಿಸಿದಳು" ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಸುಪಾರಿ ಹಂತಕರನ್ನು ಉಮೇಶ್ ಅಲಿಯಾಸ್ ಮೈಕಲ್(32) ಮತ್ತು ಮಹೀಂದರ್ ಅಲಿಯಾಸ್ ಮೊನೊ(22) ಎಂದು ಗುರುತಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+