ಯುವತಿಯರ ಮೇಲೆ ಆಸಿಡ್ ದಾಳಿ: ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಸೆರೆ
ಮೊಹಾಲಿ
(ಪಂಜಾಬ್), ಸೆ.2: ಜನನಿಬಿಡ ಪ್ರದೇಶದಲ್ಲಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಹೋಂಟಾ ಕಾರಿನಲ್ಲಿ ಕುಳಿತಿದ್ದ ಇಬ್ಬರು ಯುವತಿಯರ ಮೇಲೆ ಆಸಿಡ್ ಎಸೆದು ಪರಾರಿಯಾಗಿದ್ದಾರೆ. ಯುವತಿಯರಿಗೆ ತೀವ್ರ ಪ್ರಮಾಣದಲ್ಲಿ ಸುಟ್ಟಗಾಯಗಳಾಗಿದ್ದು, ಅವನ್ನು ಚಂಡಿಗಡದ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದೆ. id="toptextpromo">ಗುರುವಾರ
ಇಲ್ಲಿನ ಧೌನ್ ಗ್ರಾಮದ ಬಳಿ ಪೆಟ್ರೋಲ್ ಬಂಕಿನಲ್ಲಿ ಇಂಧನ ತುಂಬಿಸಿಕೊಳ್ಳಲು ಯುವತಿಯರು ತಮ್ಮ ಕಾರನ್ನು ನಿಲ್ಲಿಸಿದ್ದರು. ಅಲ್ಲಿಗೆ ಬೈಕಿನಲ್ಲಿ ಬಂದ ಯುವಕರು ಈ ದುಷ್ಕೃತ್ಯ ಎಸಗಿದ್ದಾರೆ. ಈ ಕುಕೃತ್ಯವು ಪೆಟ್ರೋಲ್ ಬಂಕಿನ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. id='are-slot-1' class='oiad oi-axt oiadv'> id='top-searched-articles'>ಸ್ಪಷ್ಟ
ಸುಳಿವು ದೊರೆತ ತಕ್ಷಣ ಕಾರ್ಯಪ್ರವೃತ್ತರಾದ ಮೊಹಾಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದು, ಆರೋಪಿಗಳ ಬೇಟೆಯಾಡುತ್ತಿದ್ದಾರೆ. ಹಳೆಯ ದ್ವೇಷ ಘಟನೆಗೆ ಕಾರಣವಿರಬಹುದು ಎಂದು ಎಸ್ ಪಿ ಗುರಪ್ರೀತ್ ಸಿಂಗ್ ಭುಲ್ಲಾಡ್ ತರ್ಕಿಸಿದ್ದಾರೆ. ಯುವತಿಯರು ಸ್ಥಳೀಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.











Click it and Unblock the Notifications