ವಾರಂಗಲ್ ವಿದ್ಯಾರ್ಥಿಗೆ ಫೇಸ್ ಬುಕ್ ನಲ್ಲಿ ಬಂಪರ್ ಜಾಬ್

ವಾರ್ಷಿಕ 45 ಲಕ್ಷ ರೂಪಾಯಿ ವೇತನ ನೀಡುವ ಭರವಸೆಯೊಂದಿಗೆ ಆಯ್ಕೆ ಪತ್ರವನ್ನು ವಿದ್ಯಾರ್ಥಿಗೆ ನೀಡಲಾಗಿದೆ. ಎನ್ಐಟಿ ವಾರಂಗಲ್ ಕ್ಯಾಂಪಸ್ ನೇಮಕಾತಿ ಮೂಲಕ ಫ್ರೆಶರ್ ಒಬ್ಬ ಈ ಮಟ್ಟದ ವೇತನ ಶ್ರೇಣಿ ಪಡೆಯುತ್ತಿರುವುದು ಹೊಸ ದಾಖಲೆಯಾಗಿದೆ.
2012 ಮಾರ್ಚ್ ವೇಳೆಗೆ ವಿದ್ಯಾರ್ಥಿಯ ಶಿಕ್ಷಣ ಪೂರ್ಣಗೊಳ್ಳಲಿದ್ದು, ನಂತರ ಫೇಸ್‌ಬುಕ್ ಸಂಸ್ಥೆಯ ಟೆಕ್ನಿಕಲ್ ವಿಭಾಗಕ್ಕೆ ಸೇರಲಿದ್ದಾರೆ.
ಸುಮಾರು 51 ವರ್ಷ ಇತಿಹಾಸವಿರುವ ಎನ್ ಐಟಿಯಲ್ಲಿ ಇದುವರೆವಿಗೂ ನಡೆದ ನೇಮಕಾತಿಯಲ್ಲಿ 20 ಲಕ್ಷ ರೂಪಾಯಿ ವೇತನ ಶ್ರೇಣಿ ಪಡೆದಿದ್ದೆ ದಾಖಲೆಯಾಗಿತ್ತು. ಈಗ 21 ವರ್ಷ ವಯಸ್ಸಿನ ಈ ವಿದ್ಯಾರ್ಥಿ ಹೊಸ ದಾಖಲೆ ಬರೆದಿದ್ದಾನೆ.












Click it and Unblock the Notifications