ಕುಮ್ಮಿ ಕೊಟ್ಟ ಗಿಫ್ಟ್ ಅನಿತಾಗೆ ಆಯ್ತು ಬ್ಯಾಡ್ ಲಕ್

Anita Kumaraswamy
ಬೆಂಗಳೂರು, ಆ.30: ಅಂದು ಮಣ್ಣಿನ ಮಗ ಎಚ್ ಡಿ ದೇವೇಗೌಡರ ಕಿರಿ ಸೊಸೆ ಅನಿತಾ ಕುಮಾರಸ್ವಾಮಿಗೆ ಪತಿ ಎಚ್ ಡಿ ಕುಮಾರಸ್ವಾಮಿ ಅವರಿಂದ ಭಾರಿ ಗಿಫ್ಟ್ ಸಿಕ್ಕಿತು ಎಂದು ಸಂಭ್ರಮ ಪಟ್ಟಿದ್ದರು. ಇಂದು ಗಿಫ್ಟ್ ದೆಸೆಯಿಂದ ಕೋರ್ಟ್ ಕಟಕಟೆ ಹತ್ತಿ, ಜೈಲು ಸೇರುವ ಭೀತಿಯಲ್ಲಿದ್ದಾರೆ.

ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಮಾರು 9 ಕೋಟಿ ಮೌಲ್ಯದ ನಿವೇಶನವನ್ನು ಗಿಫ್ಟ್ ಡೀಡ್ ಮಾಡಿ ನೀಡಿದ್ದರು. ಖರೀದಿ ಲೆಕ್ಕಾಚಾರಕ್ಕೆ ಇರಲಿ ಎಂದು 1.36 ಲಕ್ಷ ರು ಕೂಡಾ ಅನಿತಾ ಅವರು ಕಟ್ಟಿದ್ದರು.

ಎಲ್ಲಿದೆ ಸೈಟ್ : ಗಿರಿನಗರ ಬಳಿಯ ನಿವೇಶನವು ವಿಶ್ವಭಾರತಿ ಗೃಹ ಸೊಸೈಟಿಗೆ ಸೇರುತ್ತದೆ. ಆಂಗ್ಲ ಪತ್ರಿಕೆಯೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅನಿತಾ ಅವರು, ನನಗೆ ಈಗ ಅದರ ಬಗ್ಗೆ ಅಷ್ಟಾಗಿ ನೆನಪಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರು.

110 X 150 ವಿಸ್ತೀರ್ಣದ ನಿವೇಶನ ಸಂಖ್ಯೆ 702 ಪಡೆಯಲು ಅನಿತಾ ಅವರು ನೀಡಿದ್ದು ಕೇವಲ 1.63 ಲಕ್ಷ ರು ಮಾತ್ರ. ಏ.15, 2006ರಂದು ಸೇಲ್ ಡೀಡ್ ಮೇಲೆ ಅನಿತಾ ಕೆ ಸ್ವಾಮಿ ಎಂದು ಸಹಿ ಮಾಡಿದ್ದಾರೆ ಎಂದು ಮಿಡ್ ಡೇ ವರದಿ ಹೇಳುತ್ತದೆ.

ವಿಶ್ವಭಾರತಿ ಸೊಸೈಟಿಗೆ ಅನಿತಾ ಅವರು ಸದಸ್ಯರಲ್ಲ. ಸೊಸೈಟಿ ಅಧ್ಯಕ್ಷರು ಕುಮಾರಸ್ವಾಮಿ ಅವರೊಡನೆ ಒಳಒಪ್ಪಂದ ಮಾಡಿಕೊಂಡು ನಿವೇಶನವನ್ನು ಕಡಿಮೆ ಬೆಲೆಗೆ ಮಾರಿಕೊಂಡಿದ್ದಾರೆ.

ಲೇಔಟ್ ಕೃಷ್ಣಭಟ್ಟ: 1973ರಲ್ಲಿ ಆರಂಭವಾದ ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಕಟ್ಟಿ ಬೆಳಸಿದ್ದು ಗಿರಿನಗರ ಎಂಬ ಬಡಾವಣೆ. ಇಂದು ನಾಲ್ಕು ಹಂತದಲ್ಲಿ ಈ ಪ್ರತಿಷ್ಠಿತ ಬಡಾವಣೆ ಮೇಲಕ್ಕೆದಿದೆ. ಕೊನೆಯ ಹಂತಕ್ಕೆ ಮಾತ್ರ ಕಾನೂನಿನ ತೊಡಕು ಎದುರಾಗಿದೆ.

ಈ ಸಮಯದಲ್ಲಿ ಹಿರಿಯ ಸದಸ್ಯರ ಪಟ್ಟಿ ತಯಾರಿಸಿ ಅದರ ಆಧಾರದ ಮೇಲೆ ಸದಸ್ಯರಿಗೆ ಮಾತ್ರ ಸೈಟು ಹಂಚುವಂತೆ ಬಿಡಿಎಗೆ ಪಟ್ಟಿ ಸಲ್ಲಿಸಬೇಕಿತ್ತು. ಆದರೆ ಸರ್ಕಾರದ ಆದೇಶ ಹೊರ ಬೀಳುವ ಮುನ್ನವೇ ಎಷ್ಟೋ ನಿವೇಶನಗಳು ಹಂಚಿಕೆಯನ್ನು ಕೃಷ್ಣಭಟ್ ಮುಗಿಸಿಬಿಟ್ಟಿದ್ದರು.

ಸದಸ್ಯರಲ್ಲದವರು ಅಂದಿನ ಮಾರುಕಟ್ಟೆ ಬೆಲೆ ಕೊಟ್ಟು ನಿವೇಶನ ಪಡೆದರು. ಕೋರ್ಟ್ ಆದೇಶ ಹಾಗೂ ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಯಿತು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಂದ ಪಡೆದ ಯಾವುದೋ ಉಪಕಾರವನ್ನು ಸ್ಮರಿಸಿಕೊಂಡ ಭಟ್, ನಿವೇಶನವನ್ನು ಅನಿತಾ ಅವರಿಗೆ ತಲುಪಿಸಿಬಿಟ್ಟರು. ಅದು ಊಹಿಸಲಸಾಧ್ಯವಾದ ಬೆಲೆಗೆ ಕುಮಾರಸ್ವಾಮಿ ಅವರು ತಮ್ಮ ಪತ್ನಿಗೆ ಗಿಫ್ಟ್ ನೀಡಿದರು. ಈಗ ಗಿಫ್ಟ್ ಇಬ್ಬರ ಕೊರಳಿಗೆ ಉರುಳಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+