ಭ್ರಷ್ಟ ಮುಶರ್ರಫ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

2008ರಲ್ಲಿ ಪಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮುಶರ್ರಫ್ ದುಬೈ ಹಾಗೂ ಲಂಡನ್‌ನಲ್ಲಿ ಸ್ವಯಂಪ್ರೇರಣೆಯಿಂದ ದೇಶಭ್ರಷ್ಟ ಜೀವನವನ್ನು ನಡೆಸುತ್ತಿದ್ದಾರೆ. 2007ರಲ್ಲಿ ನಡೆದ ಮಾಜಿ ಅಧ್ಯಕ್ಷೆ ಬೇನಝೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಶರ್ರಫ್ ಪಾಕ್ ಸರಕಾರಕ್ಕೆ ಬೇಕಾಗಿದ್ದಾರೆ.
ಬೇನಝೀರ್‌ಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲು ವಿಫಲರಾಗಿದ್ದುದಕ್ಕಾಗಿ ಮುಶರ್ರಫ್ ವಿರುದ್ಧ ಪ್ರಾಸಿಕ್ಯೂಟರ್‌ಗಳು ಹಲವಾರು ಸಲ ಬಂಧನ ವಾರಂಟ್‌ಗಳನ್ನು ಜಾರಿಗೊಳಿಸಿದ್ದರು. ಆದರೆ ತನ್ನ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಬೇನಝೀರ್ ಹತ್ಯೆಗೆ ತಾನು ಸಂಚು ರೂಪಿಸಿದ್ದೆನೆ ಎಂಬ ಆರೋಪಗಳನ್ನು ಮುಶರ್ರಫ್ ಬಲವಾಗಿ ನಿರಾಕರಿಸಿದ್ದಾರೆ.
ಇದೀಗ ಬ್ಯಾಂಕ್ ಆದೇಶದಂತೆ ಮುಟ್ಟುಗೋಲುಗೊಂಡಿರುವ ಮುಶರ್ರಫ್‌ರ ಆಸ್ತಿಪಾಸ್ತಿಯು ಇಸ್ಲಾಮಾಬಾದ್ ಸಮೀಪವಿರುವ ತೋಟದ ಮನೆ ಹಾಗೂ ಹಲವಾರು ನಿವೇಶನ ಇತ್ಯಾದಿಗಳನ್ನು ಒಳಗೊಂಡಿದೆ.












Click it and Unblock the Notifications