ಕುಟುಂಬ ಕಲಹ : ಪೊಲೀಸ್ ಪತ್ನಿ ಶೂಟ್ ಸೂಸೈಡ್

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ನಿರ್ಣಯ ಕೈಗೊಳ್ಳಲಾಗದೆ ಪತಿಯೊಡನೆ ಸದಾ ಜಗಳವಾಡುತ್ತಿದ್ದ ಶುಭಾ ಅವರು ಸಾವಿನಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಪತಿ ಸುದರ್ಶನ್ ಅವರ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಶುಭಾ ಸತ್ತಿದ್ದಾರೆ.
ಹಾಸನ ಮೂಲದ ಶುಭಾ ಅವರು ಸುದರ್ಶನ್ ಪಿಎಸ್ ಎಂಬ ಪೊಲೀಸ್ ಅಧಿಕಾರಿಯನ್ನು 12 ವರ್ಷದ ಹಿಂದೆ ಮದುವೆಯಾಗಿದ್ದರು. ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆ ಸಮೀಪದ ಬಡಾವಣೆಯಲ್ಲಿ ಈ ಕುಟುಂಬ ವಾಸವಾಗಿದೆ.
ಎರಡು ಗಂಡು ಮಕ್ಕಳನ್ನು ಈ ದಂಪತಿ ಹೊಂದಿದ್ದಾರೆ. ಭಾನುವಾರ ರಾತ್ರಿ 12.30 ವೇಳೆಯಲ್ಲೇ ಜಗಳ ನಡೆದಿತ್ತು. ದಿನ ಜಗಳ, ಹೊಡೆದಾಟ, ಕೂಗಾಟ ಮಾಮೂಲಿಯಾಗಿದ್ದರಿಂದ ನಾವು ಕೂಡಾ ಏನು ಎಂದು ವಿಚಾರಿಸಲು ಹೋಗಲಿಲ್ಲ. ಬೆಳಗ್ಗೆ ನೋಡಿದರೆ ಶುಭಾ ಅವರು ಗುಂಡು ಹೊಡೆದುಕೊಂಡು ಪ್ರಾಣಬಿಟ್ಟಿದ್ದಾರೆ ಎಂದು ನೆರೆಮನೆಯವರು ಹೇಳುತ್ತಾರೆ.
ಇತ್ತೀಚೆಗೆ ಇವರ ಕುಟುಂಬ ಕಲಹ ಮೀತಿಮೀರಿತ್ತು. ಮಕ್ಕಳನ್ನು ಯಾವ ವಿದ್ಯಾಸಂಸ್ಥೆಗೆ ಸೇರಿಸಬೇಕು ಎಂಬುದರ ಬಗ್ಗೆ ಭಾರಿ ಚರ್ಚೆ ನಡೆದಿತ್ತು ಶುಭಾ ಈ ಅ ರೀತಿ ಆತುರ ನಿರ್ಧಾರ ಕೈಗೊಳ್ಳಬಾರದಿತ್ತು ಎಂದು ಶುಭಾ ಸಂಬಂಧಿಕರು ಗೋಳಾಡುತ್ತಿದ್ದಾರೆ.












Click it and Unblock the Notifications