ಮಂಗಳೂರು-ಹೈದರಾಬಾದ್ ನಡುವೆ ಸ್ಪೈಸ್ ಜೆಟ್ ವಿಮಾನ

ಹೈದರಾಬಾದಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಕೆಂಜಾರುನಲ್ಲಿರುವ ಹೊಸ ಏರ್ಪೋರ್ಟಿಗೆ 2.40ಕ್ಕೆ ವಿಮಾನ ಬಂದಿಳಿಯಲಿದೆ. ನಂತರ 3ಕ್ಕೆ ಮಂಗಳೂರಿನಿಂದ ಹೊರಟು ಹೈದರಾಬಾದಿಗೆ ಸಂಜೆ 4.40ಕ್ಕೆ ವಿಮಾನ ಇಳಿಯಲಿದೆ. ವಿಮಾನದಲ್ಲಿ 78 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಬಹುದಾಗಿದೆ.
ಮಂಗಳೂರು ಮತ್ತು ಚೆನ್ನೈ ನಡುವೆಯೂ ಅಕ್ಟೋಬರ್ 25ರಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ಆರಂಭವಾಗಲಿದೆ. ಮುಂಬೈನಿಂದ ಬರುವ ವಿಮಾನ ಸಂಜೆ 8 ಗಂಟೆಗೆ ಮಂಗಳೂರು ಏರ್ಪೋಟಿಗೆ ಬರಲಿದೆ. ಇಲ್ಲಿಂದ 8.30ಕ್ಕೆ ಮರುಪ್ರಯಾಣ ಆರಂಭಿಸಲಿದೆ.
ಹಾಗೆಯೆ, ಮಂಗಳೂರಿನಿಂದ ಬೆಂಗಳೂರಿಗೂ ಅಕ್ಟೋಬರ್ 25ರಿಂದ ಎರಡು ಸ್ಪೈಸ್ ಜೆಟ್ ವಿಮಾನಗಳು ಹಾರಾಡಲಿವೆ. ಬೆಳಗಿನ ಜಾವ ಮತ್ತು ಸಂಜೆ ಎರಡು ವಿಮಾನಗಳು ಹಾರಲಿದ್ದು, ನಿಖರವಾದ ಸಮಯ ಇನ್ನೂ ನಿಗದಿಯಾಗಬೇಕಿದೆ.












Click it and Unblock the Notifications