• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬನ್ನಿ, ಎಲ್ಲರೂ ತೋಟದ ಊಟಕೆ ಹೋಗೋಣ

|
ಬೆಂಗಳೂರು: ಆ.27: ನಿಮ್ಮ ಮನೆ ಸುತ್ತ ಮುತ್ತ ಒಂದಿಷ್ಟು ಜಾಗ ಇದೆಯಾ? ಅಲ್ಲಿ ತರಕಾರಿ ಬೆಳೆಯಬೇಕು ಅಂತ ಯೋಚಿಸುತ್ತಿದ್ದೀರ? ಹಾಗಾದರೆ ಹೇಗೆ ಯಾವ ರೀತಿ ಎಂಬ ಸಂಪೂರ್ಣ ವಿವರ ನಿಮಗೆ ಆಗಸ್ಟ್ 28 ರ ಭಾನುವಾರ ಬಿಟಿಎಂ ಲೇಔಟ್ ನಲ್ಲಿ ಸಿಗಬಹುದು.

ವಿಶ್ವ ಕಿಚನ್ ಗಾರ್ಡನ್ ದಿನದ ಅಂಗವಾಗಿ ಗಾರ್ಡನ್ ಸಿಟಿ ಫಾರ್ಮರ್ಸ್ ಟ್ರಸ್ಟ್ 'ಊಟ ಫ್ರಂ ಯುವರ್ ತೋಟ' (ಫುಡ್ ಫ್ರಂ ಯುವರ್ ಗಾರ್ಡನ್ )ಎಂಬ ಶೀರ್ಷಿಕೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ತರಕಾರಿಯನ್ನು ನಿಮ್ಮ ಮನೆಯಲ್ಲೇ ಬೆಳೆದು ತಾಜಾ ತಿನ್ನಿ ಎಂದು ಹಸಿರು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಲಭ್ಯವಿರುವ ಪುಟ್ಟ ಜಾಗದಲ್ಲೇ ಅಡುಗೆಗೆ ಬೇಕಾದ ತರಕಾರಿ ಬೆಳೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಕೃಷಿ ವೃತ್ತಿಪರರು, ಮಾರಾಟಗಾರರು ಮತ್ತು ಅನುಭವಸ್ಥರು ಅಲ್ಲಿಗೆ ಭೇಟಿ ನೀಡಿದವರಿಗೆ ತಿಳಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಏನೇನಿದೆ?

* ಸಸಿ, ಬೀಜಗಳು, ವಿವಿಧ ಸಸ್ಯ ತಳಿ, ಔಷಧೀಯ ಸಸ್ಯ, ಗಾರ್ಡನ್ ಪೋಷಣೆ ಮತ್ತು ಅಲಂಕಾರಕ್ಕೆ ಅಗತ್ಯ ವಸ್ತು, ಗೊಬ್ಬರ. ಸಾವಯವ ಗಿಡಗಳು ಮತ್ತು ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳ ಪ್ರದರ್ಶನ ಮತ್ತು ಮಾರಾಟ.

* ಕೈತೋಟ, ಗಿಡಗಳ ಪೋಷಣೆ ಮತ್ತು ಉತ್ತಮ ಆಹಾರ ಕ್ರಮದ ಕುರಿತು ಸಣ್ಣ ಸಂವಾದ.

* ಮಕ್ಕಳಿಗೆ ಮನರಂಜನೆ ಕಾರ್ಯಕ್ರಮ

ವಿಳಾಸ:

ಭಾನುವಾರ, ಆಗಸ್ಟ್ 28, ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ

AICOBOO ಗ್ರೌಂಡ್, 16 ನೇ ಮುಖ್ಯರಸ್ತೆ, 1 ನೇ ಅಡ್ಡರಸ್ತೆ, ಬಿಟಿಎಂ ಬಡಾವಣೆ 1ನೇ ಹಂತ, (ಅದ್ವೈತ್ ಪೆಟ್ರೋಲ್ ಬಂಕ್- ಅಡ್ಯಾರ್ ಆನಂದ್ ಭವನ್, ಉಡುಪಿ ಗಾರ್ಡನ್ ಜಂಕ್ಷನ್ ಬಳಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru joins other Indian cities in the movement initiated by Kitchen Gardener's International to create awareness and promote ‘grow and eat organic vegetables' in your own homes. Garden City Farmers Trust, Bengaluru brings you 'Oota from your thota' where you can learn about organic kitchen gardening. Take a look.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more