ಲೋಕಾಯುಕ್ತ ಎಸ್ಪಿ ಈಶ್ವರಚಂದ್ರಗೆ ಕೊನೆಗೂ ಗೇಟ್ ಪಾಸ್

ಈ ಹಿನ್ನೆಲೆಯಲ್ಲಿ 'ಕಳಂಕಿತ' ವಿದ್ಯಾಸಾಗರ್ ಅವರನ್ನು ಮಾತೃ ಇಲಾಖೆಗೆ ಕಳಿಸಲಾಗಿದೆ ಎಂದು ಲೋಕಾಯುಕ್ತ ಶಿವರಾಜ್ ವಿ. ಪಾಟೀಲ್ ಶುಕ್ರವಾರ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಯುವಿ ಸಿಂಗ್ ಸಲ್ಲಿಸಿರುವ ವರದಿ ಪ್ರಕಾರ 2010ರ ಮಾರ್ಚ್ 12ರಂದು 'ಕೊಪ್ಪಳ ಎಸ್‌ಪಿ' ಹೆಸರಿಗೆ ಮಹೇಶ್ 6.87 ಲಕ್ಷ ರೂಪಾಯಿ ಲಂಚ ನೀಡಿದ್ದಾನೆ. ಈ ಅವಧಿಯಲ್ಲಿ ಕೊಪ್ಪಳ ಎಸ್‌ಪಿ ಹುದ್ದೆಯಲ್ಲಿದ್ದವರು ಈಶ್ವರಚಂದ್ರ ವಿದ್ಯಾಸಾಗರ್.
ಗಮನಾರ್ಹವೆಂದರೆ ಡಾ. ಸಿಂಗ್ ವರದಿಯಲ್ಲಿ ಹೆಸರು ಉಲ್ಲೇಖವಾಗಿದ್ದ ಇತರೆ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ.
ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದವರು ಜಿಂದಾಲ್ ಸಮೂಹದ ಗಣಿ ಕಂಪನಿಯಿಂದ ಲಂಚ ಪಡೆದ ಆರೋಪ ಕುರಿತ ಪ್ರಕರಣದ ತನಿಖೆಯನ್ನೂ ವಿದ್ಯಾಸಾಗರ್ ಅವರಿಗೆ ವಹಿಸಲಾಗಿದೆ.












Click it and Unblock the Notifications