ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನೈತಿಕ ಸಂಬಂಧದ ಬೆಂಕಿಗೆ ಬಲಿಯಾದ ಹಸುಗೂಸು

By Mahesh
|
Google Oneindia Kannada News

Baby girl killed, Jaipur
ಜೈಪುರ ಆ. 26: ತನ್ನ ಪ್ರಿಯತಮೆಯ ಹಸುಗೂಸನ್ನು ಪ್ರಿಯಕರನೊಬ್ಬ ಕೊಂದ ಘಟನೆ ಇಲ್ಲಿನ ಶಿರ್ಪಾ ಪತ್ ಪ್ರದೇಶದ ಮಾನಸ್ ಸರೋವರ ಬಳಿ ನಡೆದಿದೆ.

ಅನೈತಿಕ ಸಂಬಂಧಕ್ಕೆ ಮಗು ಅಡ್ಡ ಬರುವುದು ಎಂಬ ಅನುಮಾನದಿಂದ 10 ತಿಂಗಳ ಕೂಸನ್ನು ನಿರ್ದಯವಾಗಿ ಕೊಲೆ ಮಾಡಿ, ಸುಟ್ಟು ಹಾಕಿದ ನಿರ್ದಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಜಲ್ ಬರ್ಮನ್ ಎಂಬ ಹೆಸರಿನ ಈತ ಮಗುವನ್ನು ಕೊಂದು ಮಹಾರಾಣಿ ಫಾರ್ಮ್ ಬಳಿಯ ಮೋರಿಯಲ್ಲಿ ಸುಟ್ಟು ಹಾಕಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ದೀನ ಬಂಧು ಎಂಬ ಅಮಾಯಕ ಪುರುಷನನ್ನು ಕೈಹಿಡಿದಿದ್ದ ಮಹಿಳೆಗೆ ಆರು ವರ್ಷ ಸುಖ ಸಂಸಾರ ಕಂಡಿದ್ದಳು. ಇಬ್ಬರು ಮಕ್ಕಳನ್ನು ಪಡೆದು ಅತ್ತೆ ಮಾವನ ಜೊತೆ ಬಜಾಜ್ ನಗರದಲ್ಲಿ ಸಂಸಾರ ನಡೆಸುತ್ತಿದ್ದರು. ಈ ಕುಟುಂಬದ ಮೇಲೆ ದೂರದ ಸಂಬಂಧಿ ಕಥೆಯ ವಿಲನ್ ಬರ್ಮನ್ ಕಣ್ಣು ಬಿದ್ದಿದೆ ಎಲ್ಲವೂ ನಾಶವಾಗಿ ಬಿಟ್ಟಿತು.

ಕದ್ದು ಮುಚ್ಚಿ ಬರ್ಮನ್ ಜೊತೆ ಸರಸವಾಡುತ್ತಿದ್ದ ಗೃಹಿಣಿ ಸದಾ ತನ್ನ ಮಗುವನ್ನು ಜೊತೆಗೆ ಒಯ್ಯುತ್ತಿದ್ದಳು. ಕಳೆದ ಕೆಲ ದಿನಗಳ ಹಿಂದೆ ಮಹಿಳೆ ತನ್ನ ಮಗುವನ್ನು ಕರೆದುಕೊಂಡು ವಿಹಾರಕ್ಕೆಂದು ಹೊರಗಡೆ ಬಂದಿದ್ದಾಳೆ ಈ ವಿಷಯ ಆಕೆ ಪತಿ ದೀನ ಬಂಧುಗೆ ತಿಳಿದಿರಲಿಲ್ಲ.

ಇದೇ ಸಮಯ ಬಳಸಿ ಕೊಂಡು ನಗರದ ಹೊರವಲಯದಲ್ಲಿದ್ದ ಬರ್ಮನ್ ಮಗುವನ್ನು ಕೊಂದು ಸುಟ್ಟು ಹಾಕಿದ್ದಾನೆ. ತನ್ನ ಅನೈತಿಕ ಸಂಬಂಧಕ್ಕೆ ಮಗು ಅಡ್ಡಿಯಾಗಿದೆ ಎಂದು ಹೀಗೆ ಮಾಡಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಬರ್ಮನ್ ಹೇಳಿದ್ದಾನೆ.

English summary
Illegal affair resulted in murder of 10-month-old baby girl in Bajaj Nagar, Jaipur. The Child was murdered by her mother's friend accused Kajal Burman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X