ಬಲತ್ಕಾರಕ್ಕೆ ಯತ್ನ: ಸಿದ್ದರಾಮಯ್ಯ ಪಿಎ ಅರೆಸ್ಟ್
ಬೆಂಗಳೂರು,
ಆಗಸ್ಟ್ 24: ಅತ್ಯಾಚಾರ ಯತ್ನದ ಆರೋಪದ ಮೇಲೆ ಮಾಜಿ ಡಿಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಲೋಕೇಶ್ ಅವರನ್ನು ಕಾಮಾಕ್ಷಿಪಾಳ್ಯದ ಪೊಲೀಸರು ಮಂಗಳವಾರ (ಆ 23) ರಾತ್ರಿ ಬಂಧಿಸಿದ್ದಾರೆ. id="toptextpromo">ಸಿದ್ದು
ಪಿಎ ಮತ್ತು ಆತನ ಸ್ನೇಹಿತ ಗಂಗಾಧರ್ ಎನ್ನುವವರು ಆಪ್ತ ಸ್ನೇಹಿತರು. ಗಂಗಾಧರ್ ಪತ್ನಿ ಕವಿತಾ, ಲೋಕೇಶ್ ನನ್ನ ಮನೆಗೆ ಬಂದು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಿದ್ದಾರೆಂದು ಆರೋಪಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಆರೋಪಿ ಲೋಕೇಶ್ ನನ್ನು ಬಂಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಲೋಕೇಶ್
ನನ್ನು ಇಂದು ಕೋರ್ಟಿಗೆ ಹಾಜರು ಪಡಿಸುವ ಸಾಧ್ಯತೆಯಿದೆ. ದೂರು ನೀಡಿರುವ ಕವಿತಾ ಜನತಾದಳದ ಕಾರ್ಯಕರ್ತೆಯಾಗಿದ್ದು ಈ ಘಟನೆಯಲ್ಲಿ ರಾಜಕೀಯ ವಾಸನೆ ಇಲ್ಲದಿಲ್ಲ. ಪೊಲೀಸರು ಈ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಆರೋಪಿ ಲೋಕೇಶ್ ತನ್ನ ಮೇಲಿರುವ ಆರೋಪವನ್ನು ಸಾರಾಸಗಾಟವಾಗಿ ನಿರಾಕರಿಸಿದ್ದಾರೆ.











Click it and Unblock the Notifications