ಇಂಡೇನ್ ಅಡುಗೆ ಅನಿಲ ರೀಫಿಲ್ ಬುಕ್ಕಿಂಗ್ ತಾಪತ್ರಯ

ಅದರ ಪ್ರಕಾರ ರೀಫಿಲ್‌ಗಾಗಿ ಗ್ಯಾಸ್ ಕಂಪನಿಯು ನಿಗದಿಗೊಳಿಸಿರುವ ದೂರವಾಣಿ ಸಂಖ್ಯೆಗೆ ನಾವು ನೋಂದಾಯಿಸಿಕೊಂಡಿರುವ ದೂರವಾಣಿಯ ಮೂಲಕ ಕರೆ ಮಾಡಿಯೇ ಬುಕ್ ಮಾಡಬೇಕು. ನೇರವಾಗಿ ನಮ್ಮ ವಿತರಕರ ಮೂಲಕ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಂಡೇನ್ ಕಂಪನಿಯ ಗ್ರಾಹಕರಾದ ನಾವು ನಮ್ಮ ಸ್ಥಿರ ದೂರವಾಣಿ (2244 4308) ಸಂಖ್ಯೆಯನ್ನು ನೋಂದಾಯಿಸಿಕೊಂಡಿದ್ದೇವೆ. ನಾವು ರೀಫಿಲ್ ಗಾಗಿ 89700 24365 ಸಂಖ್ಯೆಯನ್ನು ಸಂಪರ್ಕಿಸಬೇಕು.
ಆದರೆ ಈ ಸಂಖ್ಯೆಗೆ ಎಷ್ಟು ಬಾರಿ ಕರೆ ಮಾಡಿದರೂ 'ಕ್ಷಮಿಸಿ, ನಾವು ನಿಮ್ಮಿಂದ ಯಾವ ಉತ್ತರವನ್ನೂ ಪಡೆದಿಲ್ಲ' ಎನ್ನುವ ಸಂದೇಶವೇ ನಿರಂತರವಾಗಿ ಹರಿದು ಬರುತ್ತದೆ. ವಿತರಕರನ್ನು ಈ ಬಗ್ಗೆ ಕೇಳಿದರೆ 'ನಾವು ಏನೂ ಮಾಡಲು ಸಾಧ್ಯವಿಲ್ಲ. ನೀವು ನಿಗದಿತ ದೂರವಾಣಿಯ ಮೂಲಕವೇ ಬುಕ್ ಮಾಡಬೇಕು' ಎಂದು ಹೇಳುತ್ತಾರೆ.
ಹೀಗಾಗಿ ಗ್ಯಾಸ್ ರೀಫಿಲ್ ಬುಕ್ ಮಾಡುವುದು ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಅನುಭವ ನನ್ನೊಬ್ಬಳದೇ ಅಲ್ಲದೇ ಇನ್ನೂ ಅನೇಕ ಗ್ರಾಹಕರದೂ ಹೌದು. ಈ ಸಮಸ್ಯೆಗೆ ಪರಿಹಾರ ಹೇಗೆ.












Click it and Unblock the Notifications