ಗಂಡ ಬಿಟ್ಟ ನಟಿ ಸಲಿನಾಳಿಂದ ಅಣ್ಣಾಗಾಗಿ ನಂಗಾನಾಚ್!

ದೆಹಲಿಯ ಮಾಡೆಲ್ ಸಲಿನಾ ವಲಿ ಖಾನ್ ಎಂಬ ಬೆಡಗಿ ಇಂಥ ಮಾತನ್ನಾಡಿದ್ದಾಳೆ. ಅಂದಹಾಗೆ ಈಕೆ ಗಂಡನಿಂದ ಪರಿತ್ಯಕ್ತಳಾದವಳು. ಇಂತಹ ಮಾಡೆಲ್ ಸಲೀನಾ ವಲಿ ಖಾನ್ ಬಗ್ಗೆ ಆಗಸ್ಟ್ 9ರಂದು ದಟ್ಸ್ ಕನ್ನಡದಲ್ಲಿ ಸವಿಸ್ತಾರ ವರದಿ ಪ್ರಕಟವಾಗಿದೆ. ಓದಿ ಆನಂದಿಸಿ.
ಸರಕಾರ ಜನ ಲೋಕಪಾಲ ಮಸೂದೆಯನ್ನು ಜಾರಿಗೊಳಿಸದಿದ್ದರೆ ನೋಡಿ ನಾನು ಏನೇನು ಮಾಡ್ತೀನಿ ಎಂದು ಮಾಡೆಲ್ ಸಲಿನಾ ಬೆದರಿಕೆ ಹಾಕಿದ್ದಾಳೆ. ಏನಮ್ಮಾ ಮಾಡ್ತೀಯ ಅಂತ ಯಾರೂ ಕೇಳದಿದ್ದರೂ 'ನಗ್ನವಾಗಿ ಕುಣಿದು ಪ್ರತಿಭಟಿಸುತ್ತೇನೆ' ಎಂದು ಉಲಿದಿದ್ದಾಳೆ.
ತನ್ನ ನಂಗಾನಾಚ್ ಗೆ ಅವಳು ಕೊಟ್ಟಿರುವ ಸಮರ್ಥನೆ ತಾನು ಕೂಡ ಭ್ರಷ್ಟಾಚಾರದ ಬಲಿಪಶು ಎಂದು. ಹಾಗೆಂದು ಇದು ತಾನು ಪುಕ್ಕಟೆ ಪ್ರಚಾರ ಪಡೆಯಲು ಮಾಡಿದ ತಂತ್ರವಲ್ಲ ಎಂದೂ ಅವಳು ಸ್ಪಷ್ಟಪಡಿಸಿದ್ದಾಳೆ. ಅಂತೂ ಭಾರತ ವಿಶ್ವ ಕಪ್ ಗೆದ್ದರೆ ನಂಗಾನಾಚ್ ಮಾಡುವೆ ಎಂದು ಹೇಳಿ ಪೂನಮ್ ಪಾಂಡೆ ಪುಕ್ಕಟೆ ಪ್ರಚಾರ ಗಿಟ್ಟಿಸಿದ್ದಾಯ್ತು ಈಗ ಈಯಮ್ಮನ ಸರದಿ. ಯಾರು ಯಾರ ಹೊಟ್ಟೆಪಾಡು ಹೇಗಿರುತ್ತೋ ...












Click it and Unblock the Notifications