ಹುಬ್ಬಳ್ಳಿಯಲ್ಲಿ ಹೆಡ್ ಮೇಡಂ ವೇಶ್ಯಾವಾಟಿಕೆ ದಂಧೆ

ವಿದ್ಯಾನಗರದ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಲೋಮಿ ವಿಜಯ್ ಕುಮಾರ್ ಝಂಡೆ ಜಯನಗರದ ಬಾಡಿಗೆ ಮನೆಯಲ್ಲಿ ಈ ಅಸಹ್ಯ ದಂಧೆ ನಡೆಸುತ್ತಿದ್ದರು.
ಸುಲೋಮಿ ಅವರು ಹಲವಾರು ಯುವತಿಯರನ್ನು ಇಟ್ಟುಕೊಂಡು ಅನೇಕ ವರ್ಷಗಳಿಂದ ಈ ಕೆಲಸ ನಡೆಸುತ್ತಿದ್ದಾರೆ. ಬೆಳಗ್ಗೆ ಶಾಲೆ, ಸಂಜೆ ದಂಧೆಯಲ್ಲಿ ನಿರತರಾಗಿದ್ದರು ಎಂದು ಪೊಲೀಸ್ ಅಯುಕ್ತ ಕೆ ರಾಮಚಂದ್ರ ರಾವ್ ಹೇಳಿದ್ದಾರೆ.
ಎಸಿಪಿ ಎಆರ್ ಬಡಿಗೇರ್ ನೇತೃತ್ವದ ತಂಡ ದಾಳಿ ನಡೆಸಿ ಈ ವೇಶ್ಯಾವಾಟಿಕೆ ಪ್ರಕರಣವನ್ನು ಬಯಲಿಗೆಳೆದು, ಸುಲೋಮಿಯನ್ನು ಬಂಧಿಸಿದ್ದಾರೆ. ಪತಿಯನ್ನು ತೊರೆದಿರುವ ಸುಲೋಮಿಯ ಮಗ ಕೂಡಾ ಆಕೆಯಿಂದ ದೂರಾಗಿದ್ದಾನೆ.
ಕಾಲೇಜು ಹುಡುಗಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಈಕೆ, ಫೋನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಳು. ಸಮಾಜದ ಗಣ್ಯರಿಗೆ ಮಹಿಳೆಯರನ್ನು ಸಪ್ಲೈ ಮಾಡುವ ಹೀನ ಕೆಲಸವನ್ನು ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications