ದುಬೈ ವೇಶ್ಯೆಯ ಕತ್ತು ಸೀಳಿ ಸಾಯಿಸಿದ ಪಾ(ತ)ಕಿ

pakistani-slit-dubai-prostitute-throat-kills
ದುಬೈ, ಆಗಸ್ಟ್ 22‌: ಇಲ್ಲಿನ ಮುರಾಖಾಬಾದಿನಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬ ವೇಶ್ಯೆಯ ಸಂಗ ಮಾಡಿದ ಬಳಿಕ ಅವಳ ಕತ್ತಿಗೆ ಮೂರು ಬಾರಿ ಚಾಕುವಿನಿಂದ ತಿವಿದು ಸಾಯಿಸಿದ್ದಾನೆ.

ಹತ್ಯೆಗೆ ಬಳಸಿದ ಆಯುಧ ಚಾಕುವೇ ಆರೋಪಿಯ ವಿರುದ್ಧ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದೆ. ಹತ್ಯೆ ಬಳಿಕ ಆರೋಪಿಯು ಚಾಕುವನ್ನು ಟನಾ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಚಾಕುವನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದರ ಮೇಲಿದ್ದ ಬಾರ್ ಕೋಡ್ ನಿಂದಾಗಿ ಸೀದಾ ಅದರ ಮಾರಾಟವಾಗಿದ್ದ ಅಂಗಡಿಗೆ ಹೋಗಿ ಖರೀದಿದಾರನನ್ನು ಪತ್ತೆ ಹಚ್ಚಿದರು; ತನ್ಮೂಲಕ ಆರೋಪಿಯನ್ನೂ!

'ಗಲ್ಫ್ ನ್ಯೂಸ್' ದಿನಪತ್ರಿಕೆ ಪ್ರಕಾರ ಮಳಿಗೆಯಲ್ಲಿದ್ದ ಸಿಸಿಟಿವಿ ಚಿತ್ರೀಕರಣದಲ್ಲಿ ಪಾಕಿಸ್ತಾನಿ ಪ್ರಜೆ ಚಾಕು ಖರೀದಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಪಶ್ತೊ ಭಾಷೆಯನ್ನು ಮಾತ್ರ ಬಲ್ಲ 29 ವರ್ಷದ ಆರೋಪಿಗೆ ಮರಣದಂಡನೆಯಾಗುವುದು ಖಚಿತ ಎಂದು ಪೊಲೀಸರನ್ನು ಉಲ್ಲೇಖಿಸಿ ಪತ್ರಿಕೆ ಸೋಮವಾರ ವರದಿ ಮಾಡಿದೆ.

ವೇಶ್ಯೆಯ ಸಂಗದಲ್ಲಿ ಏನೆಲ್ಲ ಆಗಿತ್ತೆಂದರೆ... ಉಜ್ಬೇಕಿಸ್ತಾನದ ವೇಶ್ಯೆ ಜತೆ ಅವಳ ಅಪಾರ್ಟ್ ಮೆಂಟಿನಲ್ಲೇ ಆರೋಪಿಯು ಒಂದು ಸಂಜೆ ಸರಸ ಸಲ್ಲಾಪ ನಡೆಸಿದ್ದಾನೆ. ಅದಾದ ನಂತರ ವೇಶ್ಯೆ ಅವನಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಅವನಲ್ಲಿದ್ದ ಹಣವನ್ನು ದೋಚಿದ್ದಳು. ಮತ್ತಿಳಿದ ಬಳಿಕ ಅವಳಿಗೆ ದುಂಬಾಲು ಬಿದ್ದಿದ್ದಾನೆ. ನನ್ನ ಹಣ ವಾಪಸ್ಸು ಕೊಡು ಎಂದು ಗೋಳಾಡಿದ್ದಾನೆ. ಆದರೆ ಅವಳು ಜಪ್ಪಯ್ಯ ಎಂದರೂ ಇವನ ಕಡೆಗೆ ತಿರುಗಿ ನೋಡಿಲ್ಲ.

'ಕೊನೆಗೆ ಅವಳಿಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದವನೇ ಚಾಕು ಖರೀದಿಸಿ, ಅವಳಿಗೆ ಮುಕ್ತಿ ಕಾಣಿಸಿದೆ. ಹಿಂದಿನಿಂದ ಅವಳನ್ನು ಲಾಕ್ ಮಾಡಿಕೊಂಡೆ. ಬಳಿಕ ಅವಳ ಕತ್ತಿನಲ್ಲಿ ಮೂರು ಬಾರಿ ಚಾಕು ತುರುಕಿದೆ. ಅವಳ ಬಳಿ ಮೊಬೈಲ್ ಮಾತ್ರವೇ ಇತ್ತು. ಹಣ ಏನೂ ಇರಲಿಲ್ಲ. ಸರಿ ಅದನ್ನೇ ತೆಗೆದುಕೊಂಡು ಜಾಗ ಖಾಲಿ ಮಾಡಿದೆ' ಎಂದು ಮಹಾನುಭಾವ ತನ್ನ 'ಸಾಹಸ'ವನ್ನು ಹೇಳಿಕೊಂಡಿದ್ದಾನೆ.

ಮುಂದ!?: ಮೃತಳ ಮೊಬೈಲ್ ಸ್ವಿಚ್ ಆಫ್ ಆಗಿದ್ದೇ ತಡ ಅವಳ ಗಂಡ ಅಫಘಾನಿಸ್ತಾನದ ಪ್ರಜೆ ಆತಂಕಗೊಂಡಿದ್ದಾನೆ. ಪಾಕಿಸ್ತಾನದ ಗೆಳೆಯನಿಗೆ ಫೋನ್ ಮಾಡಿ ಅವಳೇನಾದಳೋ ಮನೆಗೆ ಹೋಗಿ ನೋಡು ಎಂದು ವಿನಂತಿಸಿದ್ದಾನೆ. ಆದರೆ ಅಷ್ಟೊತ್ತಿಗೆ ಅವಳು ಮರಳಿಬಾರದ ಲೋಕವನ್ನು ತಲುಪಿಕೊಂಡಿದ್ದಳು.
.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+