ಜರ್ಮನಿಯಲ್ಲಿ ಫೇಸ್ ಬುಕ್ ಬಳಕೆ ನಿಷೇಧ

ತಂತ್ರಜ್ಞಾನ ಆಧಾರಿತ ತಾಣ ZDNet ವರದಿಯಂತೆ, ಇಂಡಿಪೆಂಡೆಂಟ್ ಸೆಂಟರ್ ಫಾರ್ ಪ್ರೈವಸಿ ಪ್ರೊಟೆಕ್ಷನ್ (ULD) ಎಂಬ ಸಂಸ್ಥೆ ಫೇಸ್ ಬುಕ್ ಲೈಕ್ ಬಟನ್ ಬಳಸದಂತೆ ಆಗ್ರಹಿಸಿದೆ. ಲೈಕ್ ಬಟನ್ ಒತ್ತುವುದರ ಮೂಲಕ ನಿಮ್ಮ ಖಾತೆ ವಿವರಗಳು ಸಂಪೂರ್ಣವಾಗಿ ಬಟಬಯಲಾಗುತ್ತದೆ. ಸುರಕ್ಷತೆ ಇಲ್ಲದ ಈ ಕ್ರಮವನ್ನು ಬೆಂಬಲಿಸಬೇಡಿ ಎಂದು ಹೇಳಲಾಗಿದೆ.
ಸ್ಥಳೀಯ ವೆಬ್ ತಾಣಗಳು ಸೆ.1 ರೊಳಗೆ ಫೇಸ್ ಬುಕ್ ಲೈಕ್ ಬಟನ್ ಪ್ಲಗ್ ಇನ್ ತೆಗೆಯದಿದ್ದರೆ 72,000 ಡಾಲರ್ ದಂಡ ತೆರಬೇಕಾಗುತ್ತದೆ. ಸಮಾಜಿಕ ಜಾಲ ತಾಣಗಳ ಪ್ಲಗ್ ಇನ್ ಮೂಲಕ ಹಲವು ಕಂಪನಿಗಳು ಗ್ರಾಹಕರ ಖಾತೆ ಮೇಲೆ 2 ವರ್ಷದ ತನಕ ಹಿಡಿತ ಸಾಧಿಸಬಹುದಾಗಿದೆ. ಬಳಕೆದಾರರ ವೆಬ್ ಚಟುವಟಿಕೆಗಳು ಕಂಪನಿಗೆ ಸಂಪೂರ್ಣ ತಿಳಿಯುತ್ತಿದ್ದರೆ, ಸುರಕ್ಷತೆ, ಗೌಪ್ಯತೆ ಎಂಬುದಕ್ಕೆ ಅರ್ಥ ಎಲ್ಲಿರುತ್ತದೆ ಎಂದು ULD ಪ್ರಶ್ನಿಸುತ್ತಿದೆ.
ಗ್ರಾಹಕರ ಮಾಹಿತಿ ಸಂಗ್ರಹಿಸಿ, ಜಾಹೀರಾತು ಮೌಲ್ಯ ಹೆಚ್ಚಿಸಿಕೊಳ್ಳುತ್ತಿರುವ ಫೇಸ್ ಬುಕ್ ತನ್ನ ಮಾರುಕಟ್ಟೆ ಮೌಲ್ಯವನ್ನು 50 ಬಿಲಿಯನ್ ಡಾಲರ್ ಗೆ ಹೆಚ್ಚಿಸಿಕೊಂಡಿರುವುದಕ್ಕೆ ಬಳಕೆದಾರರ ಖಾತೆ ಮಾಹಿತಿ ಸೋರಿಕೆಯೇ ಕಾರಣ ಎನ್ನಲಾಗಿದೆ.
ಜರ್ಮನಿಯ ಈ ನಿರ್ಣಯದಿಂದ ಜಗತ್ತಿನ ಅತಿ ವಿಸ್ತಾರವಾದ ಸಾಮಾಜಿಕ ಜಾಲತಾಣ ಫೇಸ್ ಬುಕ್ ಶಾಕ್ ಆಗಿದೆ. ಸುಮಾರು 750 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ನಿಷೇಧದ ವಿರುದ್ಧ ಯುರೋಪಿಯನ್ ಯೂನಿಯನ್ ನಲ್ಲಿ ವಾದಿಸುವುದಾಗಿ ಹೇಳಿದೆ.












Click it and Unblock the Notifications