ಶಾರ್ಜಾ: ಲಿಫ್ಟ್ ನಲ್ಲಿ ಮಹಿಳೆಯ ಮಾನಭಂಗ
ಶಾರ್ಜಾ,
ಆಗಸ್ಟ್ 21: ಇಲ್ಲಿನ ಅಲ್ ಖಸೀಮಿಯಾ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟಿನ ಲಿಫ್ಟ್ (ಎಲಿವೇಟರ್)ನಲ್ಲಿ ಯುವಕನೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡಿ, ಮಾನಭಂಗ ಮಾಡಿ, ಹಣ ಒಡವೆಯನ್ನೂ ದೋಚಿದ್ದಾನೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. id="toptextpromo">ಅರಬ್
ಮಹಿಳೆಯ ಮಾನಭಂಗ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ತಕ್ಷಣವೇ ಬಾಂಗ್ಲಾದೇಶದ 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಲಿಫ್ಟ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕಳವನ್ನೂ ನೀಡಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಮಹಿಳೆಯು ಪೊಲೀಸರನ್ನು ಸಂಪರ್ಕಿಸಿ, ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ತಕ್ಷಣ
ಕಾರ್ಯಪ್ರವೃತ್ತರಾದ ಪೊಲೀಸರು ಅಪಾರ್ಟ್ ಮೆಂಟಿನ ಆಸುಪಾಸಿನಲ್ಲಿ ಶೋಧ ನಡೆಸಿದ್ದಾರೆ. ಆರೋಪಿಗೆ ಪರಾರಿಯಾಗಲು ಹೆಚ್ಚು ಸಮಯ ಸಿಕ್ಕಿಲ್ಲವಾದ್ದರಿಂದ ಅಲ್ಲಿಯೇ ಇದ್ದ ಅಲ್ಯುಮಿನಿಯಂ ಡಸ್ಟ್ ಬಿನ್ ಲ್ಲಿ ಬಚ್ಚಿಟ್ಟುಕೊಂಡಿದ್ದ. ಆರೋಪಿಯನ್ನು ಬಂಧಿಸಿದ್ದು, ಅವನಿಂದ ಚಿನ್ನದ ಸರ, ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications