MTR ದೋಸೆ ತಿಂದು all is well ಎಂದ ಯಡಿಯೂರಪ್ಪ

ಇದನ್ನು ಖಚಿತಪಡಿಸಿಕೊಂಡ ಯಡಿಯೂರಪ್ಪ ಭಾನುವಾರ ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯಿಂದ ಹೊರಬಂದವರೇ ನೇರವಾಗಿ ಲಾಲ್ ಬಾಗ್ ಮುಖ್ಯದ್ವಾರದ ಎದುರು ಇರುವ ಸುವಿಖ್ಯಾತ ಎಂಟಿಆರ್ ಹೋಟೆಲಿಗೆ ಪಟಾಲಂ ಸಮೇತ ದಾಂಗುಡಿಯಿಟ್ಟಿದ್ದಾರೆ.
ಮಾಜಿಯಾಗಿದ್ದರೂ ಹಿಂದೆ ಮುಂದೆ ಸರಕಾರಿ ಕಾರುಗಳೊಂದಿಗೆ ಆಗಮಿಸಿದ ಯಡಿಯೂರಪ್ಪ ಲಾಲ್ ಬಾಗ್ ಎದುರಿಗಿನ ಆಹ್ಲಾದಕರ ವಾತಾವರಣ ನೋಡಿ ಮತ್ತಷ್ಟು ಹರ್ಷಗೊಂಡಿದ್ದಾರೆ. ಎಂದಿನ ವೈಟ್ ಸೂಟು ಬಿಚ್ಚಿಟ್ಟು ತುಂಬು ತೋಳಿನ ಷರ್ಟಿನಲ್ಲಿ ಕಂಗೊಳಿಸುತ್ತಿದ್ದರು.
ಏನೂ ಆಗಿಲ್ಲ ಅಂತ ವೈದ್ಯರೇ ಹೇಳಿದ್ದಾರೆ ಎಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು. ಹೊಟ್ಟೆ ತುಂಬ ತಿನ್ನುತ್ತಾ, ಹೋಟೆಲಲ್ಲಿದ್ದ ನಮ್ಮತ್ತ ಮುಗುಳ್ನಗೆ ಬೀರಿದರು ಎಂದು ಪ್ರತ್ಯಕ್ಷದರ್ಶಿಗಳು ಸಂತಸದಿಂದ ಹೇಳಿಕೊಂಡಿದ್ದಾರೆ.












Click it and Unblock the Notifications