ಬಾಲಕಿ ರೇಪ್, ಕೊಲೆ : ಶೇಮ್ ಶೇಮ್ ಮಾಯಾವತಿ

ಅತ್ಯಾಚಾರಿಗಳ ಅಡ್ಡವಾಗಿ ಮಾರ್ಪಟ್ಟಿರುವ ಲಖೀಂಪುರ್ ಖೆರ್ ಜಿಲ್ಲೆಯಲ್ಲಿ ಇತ್ತೀಚೆಗೆ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿ ಕೊಲೆ ಮಾಡಲಾಗಿದೆ.
ಉಮ್ರಾ ಎಂಬ ಗ್ರಾಮಕ್ಕೆ ಸೇರಿದ ಬಾಲಕಿ ಜಲಬಾಧೆ ತೀರಿಸಿಕೊಳ್ಳಲು ಮನೆಯಿಂದ ಹೊರಗಡೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮನೆಯಿಂದ ಹೊರಗೆ ಹೋದ ಮಗಳು ಎಷ್ಟು ಹೊತ್ತಾದರೂ ಬಾರದಿರುವುದನ್ನು ಕಂಡು ಕಂಗಾಲಾದ ತಾಯಿ ಬಯಲಿಗೆ ಬಂದು ಹುಡುಕಿದಾಗ ಮಗಳ ಮೃತ ದೇಹ ಕಂಡು ಚೀರಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದವನನ್ನು ಕಮಲೇಶ್ ರಾಣಾ ಎಂದು ಗುರುತಿಸಲಾಗಿದೆ.
ನನ್ನ ಮಗಳನ್ನು ರೇಪ್ ಮಾಡಿ ಕೊಲೆ ಮಾಡಿರುವ ಕಮಲೇಶ್ ನನ್ನು ನೇಣಿಗೆ ಹಾಕಿ ಎಂದು ಬಾಲಕಿಯ ತಾಯಿ ಠಾಣೆಯ ಮುಂದೆ ರೋದಿಸುತ್ತಿದ್ದಾರೆ. ಆರೋಪಿ ಕಮಲೇಶ್ ನಾಪತ್ತೆಯಾಗಿದ್ದಾನೆ. ರಾಣಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications