ಲೈಂಗಿಕ ಕಿರುಕುಳ: ಪ್ಯಾದೆಗೆ ಬೆಂಡೆತ್ತಿದ ಮಹಿಳಾ ಪೇದೆ
ಕುಣಿಗಲ್
(ತುಮಕೂರು ಜಿಲ್ಲೆ), ಆಗಸ್ಟ್ 20: ಪೇದೆಯ ಅಸಭ್ಯ ವರ್ತನೆಯಿಂದ ರೋಸಿ ಹೋದ ಮಹಿಳಾ ಕಾನ್‌ಸ್ಟೆಬಲ್ ಅವನ್ನು ಬೂಟಿನಿಂದ ಹೊಡೆದು ಮೇಲಾಧಿಕಾರಿಗಳಿಗೆ ದೂರು ನೀಡಿದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ. id="toptextpromo">ಠಾಣೆಯಲ್ಲಿ
ಮಧ್ಯಾಹ್ನ ಸೆಂಟ್ರಿ ಡ್ಯೂಟಿಯಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಕಾರ್ಯನಿಮಿತ್ತ ಕಂಪ್ಯೂಟರ್ ಸೆಕ್ಷನ್‌ಗೆ ತೆರಳಿದ ಸಂದರ್ಭದಲ್ಲಿ ಕಾನ್‌ಸ್ಟೆಬಲ್ ಸಿದ್ದಲಿಂಗ ಆರಾಧ್ಯ ಅಸಭ್ಯವಾಗಿ ವರ್ತಿಸಿದ್ದಾರೆ. ಪರಿಸ್ಥಿತಿ ಅತಿರೇಕಕ್ಕೆ ಹೋದಾಗ ಸಹಿಸದ ಮಹಿಳಾ ಕಾನ್‌ಸ್ಟೆಬಲ್ ತನ್ನ ಬೂಟಿನಿಂದ ಕಾನ್‌ಸ್ಟೆಬಲ್ ಆರಾಧ್ಯನಿಗೆ ಥಳಿಸಿ ನಂತರ ಮೇಲಧಿಕಾರಿಗೆ ದೂರು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಬಗ್ಗೆ ಅಧಿಕಾರಿಗಳು ಎಲ್ಲ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಕರೆದು ಚರ್ಚಿಸಿದಾಗ ಯಾರೊಬ್ಬರೂ ಆರಾಧ್ಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಅಸಭ್ಯ ವರ್ತನೆ ತೋರಿದ ಕಾನ್‌ಸ್ಟೆಬಲ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications