ಕಟ್ಟಾ ಋಣ: ಶೋಭಾ ಕರಂದ್ಲಾಜೆ ವಿರುದ್ಧವೂ ಇ.ಡಿ ತನಿಖೆ?
ಬೆಂಗಳೂರು,
ಆಗಸ್ಟ್ 20: 'ಹಣದ ಅಕ್ರಮ ಚಲಾವಣೆ' (ಮನಿ ಲಾಂಡರಿಂಗ್) ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಸಚಿವೆ ಶೋಭಾ ಕರಂದ್ಲಾಜೆ ವರ ವಿರುದ್ಧವೂ ತನಿಖೆ ನಡೆಸುವ ಸಾಧ್ಯತೆ ಇದೆ. ಅಂದಹಾಗೆ ಶೋಭಾ ಅವರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಂದ 70 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇಟಾಸ್ಕಾ ಕಂಪನಿ ನೀಡಿದ ಲಂಚದ ಮೊತ್ತದಲ್ಲೇ ರೂ 70 ಲಕ್ಷವನ್ನು ಕಟ್ಟಾ ಸಾಲವಾಗಿ ನೀಡಿದ್ದರು. id="toptextpromo">ಕೆಲವೇ
ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದು ಈ ಮೊತ್ತವನ್ನು ಕಟ್ಟಾ ಅವರಿಗೆ ಮರಳಿಸಿದ್ದರು ಎಂಬ ಮಹತ್ವದ ಅಂಶ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿದೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಶೋಭಾ ಅವರಿಂದ ಸಾಲದ ಮೊತ್ತವನ್ನು ಕಟ್ಟಾ ವಾಪಸ್ ಪಡೆದಿರುವುದು ಶಂಕಾಸ್ಪದ ರೀತಿಯಲ್ಲಿದೆ. ನೇರವಾಗಿ ಸಾಲ ಮರುಪಾವತಿಸದೇ ಜಿ.ವಿ. ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಕಂಪನಿಗೆ 70 ಲಕ್ಷ ರೂಪಾಯಿ ಮರಳಿಸಲಾಗಿದೆ. ಈ ರೀತಿಯ ಹಣದ ವಹಿವಾಟಿನ ಬಗ್ಗೆಯೂ ಇಡಿ ಮಾಹಿತಿ ಕಲೆಹಾಕಿದ್ದು, ಶೋಭಾ ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.











Click it and Unblock the Notifications