ದಾವೂದ್ ಬಲಗೈ ಬಂಟ ಚೋಟಾ ಶಕೀಲ್ ತಂದೆ ನಿಧನ
ಮುಂಬೈ,
ಆ.20: ಭೂಗತ ದೊರೆ ಚೋಟಾ ಶಕೀರ್ ತಂದೆ ಮುಂಬೈನ ಆಸ್ಪತ್ರೆಯಲ್ಲಿ ಶುಕ್ರವಾರ (ಆ.19) ಕೊನೆಯುಸಿರೆಳೆದಿದ್ದಾನೆ. ಈತನಿಗೂ ಭೂಗತ ಜಗತ್ತಿನೊಂದಿಗೆ ಒಡನಾಡವಿತ್ತು. ಬಾಬುಮಿಯನ್ ಮಯುದ್ದೀನ್ ಶೇಕ್‌ಗೆ (83) ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. id="toptextpromo">ಕೆಲದಿನಗಳ
ಹಿಂದೆ ಶೇಕ್ ಅನಾರೋಗ್ಯಕ್ಕೆ ತುತ್ತಾದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಶೇಕ್‌ನನ್ನು ಬಂದು ನೋಡಿಕೊಂಡು ಹೋಗುವವರ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಆದರೆ ಚೋಟಾ ಶಕೀಲ್ ಬಂಟರಾರೂ ಅತ್ತ ಸುಳಿಯದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಚಿತ್ರ
ಎಂದರೆ ಚೋಟಾ ಶಕೀಲ್ ತಂದೆ ಮತ್ತೊಬ್ಬ ಭೂಗತ ಪಾತಕಿ ಹಾಗೂ 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ಎಂಬುದು. ತನ್ನ ತಂದೆ ಸಾವಿನ ಬಗ್ಗೆ ಶಕೀಲ್ ಯಾರ್ಯಾರಿಗೆ ಕರೆ ಮಾಡಿರಬಹುದು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.











Click it and Unblock the Notifications