ಹದ್ದು ಮೀರಿದ ಆಣ್ಣಾ ಎಫೆಕ್ಟ್: ಪಾಕ್‌ನಲ್ಲಿ ಅಣ್ಣಾ ಅಖ್ತರ್ ಹೋರಾಟ
ಇಸ್ಲಾಮಾಬಾದ್,
ಆಗಸ್ಟ್ 20 : ಆಣ್ಣಾ ಎಫೆಕ್ಟ್ ಸರಹದ್ದು ಮೀರಿದೆ. ಅದು ನೆರೆ ರಾಷ್ಟ್ರಕ್ಕೂ ಹಬ್ಬಿದೆ! ನೆರೆ ರಾಷ್ಟ್ರದ ಲೋಕಪಾಲ ಮಸೂದೆಯ ಮಾದರಿಯಲ್ಲೇ ಪಾಕ್ ಸಂಸತ್ತಿನಲ್ಲೂ ಭ್ರಷ್ಟಾಚಾರ ನಿಗ್ರಹ ಮಸೂದೆ ಅಂಗೀಕರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ 68 ವರ್ಷದ ರಾಜಾ ಜಹಾಂಗೀರ್ ಅಖ್ತರ್ ಹೇಳಿದ್ದಾರೆ id="toptextpromo">ಭಾರತದ
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರೇ ನನಗೆ ಪ್ರೇರಣೆ ಎಂದಿರುವ ಪಾಕಿಸ್ತಾನದ ವ್ಯಾಪಾರಿ ಜಹಾಂಗೀರ್ ಅಖ್ತರ್, ತಾವೂ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಮತ್ತು ದಕ್ಷಿಣ ಏಷ್ಯಾದಲ್ಲಿ ಸೇನಾ ವೆಚ್ಚ ಕಡಿತಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಹಾಂಗೀರ್
ಅಖ್ತರ್ ಸದ್ಯಕ್ಕೆ ರಂಜಾನ್ ಉಪವಾಸ ಆಚರಿಸುತ್ತಿದ್ದು, ಅದು ಮುಗಿಯುತ್ತಿದ್ದಂತೆ ಮುಂದಿನ ತಿಂಗಳ 12ರಿಂದ ಈ ಪ್ರತಿಭಟನೆ ಆರಂಭಿಸುವುದಾಗಿ ಹೇಳಿದ್ದಾರೆ. ಇವರು ಇಸ್ಲಾಮಾಬಾದಿನಲ್ಲಿರುವ ಸೂಪರ್ ಮಾರ್ಕೆಟ್ ಒಂದರ ಮಾಲೀಕ.











Click it and Unblock the Notifications