ಫೈರ್ ಫಾಕ್ಸ್ 6 ರಲ್ಲಿ ಒಮ್ಮೆ ಜಾಲಾಡಿ ನೋಡಿ

ಮೊಝಿಲ್ಲಾ ಫೈರ್ ಫಾಕ್ಸ್ 4 ಬಿಡುಗಡೆಗೊಂಡ ಮೂರು ತಿಂಗಳೊಳಗೆ ಮೊಝಿಲ್ಲಾ ತನ್ನ ಹೊಚ್ಚ ಹೊಸ ಆವೃತ್ತಿ 5 ರಿಲೀಸ್ ಮಾಡಿತ್ತು. ಈಗ ಇನ್ನಷ್ಟು ಹೆಚ್ಚಿನ ಸುರಕ್ಷತಾ ಸೌಲಭ್ಯಗಳೊಂದಿಗೆ ಫೈರ್ ಫಾಕ್ಸ್ 6 ಬಿಡುಗಡೆಗೊಂಡಿದೆ.
ಫೈರ್ ಫಾಕ್ಸ್ 6 ರಲ್ಲಿ ತಕ್ಷಣಕ್ಕೆ ಎದ್ದು ಕಾಣುವ ಬದಲಾವಣೆ ಎಂದರೆ ಅಡ್ರೆಸ್ ಬಾರ್, ಬಳಕೆದಾರರು ಭೇಟಿ ನೀಡುವ ವೆಬ್ ತಾಣಗಳನ್ನು ಹೈಲೇಟ್ ಮಾಡುತ್ತದೆ. ವೆಬ್ ಸಾಕೆಟ್ಸ್ ನ ಇತ್ತೀಚಿನ ಆವೃತ್ತಿ ಅಳವಡಿಕೆಯೊಂದಿಗೆ ಸುರಕ್ಷತೆ ಇನ್ನೂ ಹೆಚ್ಚಿದೆ. ಸ್ಕಾರ್ಚ್ ಪ್ಯಾಡ್, ವೆಬ್ ಡೆವಲಪರ್ ಮೆನು ಸೇರಿದಂತೆ ಹತ್ತು ಹಲವು ಹೊಸ ಸೌಲಭ್ಯಗಳನ್ನು ಸೇರಿಸಲಾಗಿದೆ.
* about:permissions ಮೂಲಕ ಪ್ರತಿ ವೆಬ್ ತಾಣಗಳಿಗೂ ಪ್ರತ್ಯೇಕ ಅನುಮತಿ ನಿಯಂತ್ರಕವನ್ನು ಸ್ಥಾಪಿಸಬಹುದು. ಇದರಿಂದ ಕುಕಿಸ್ ಸ್ವೀಕರಿಸಲು, ಪಾಸ್ ವರ್ಡ್ ಸೇವ್ ಮಾಡಲು ಅನುಕೂಲವಾಗುತ್ತದೆ.
* site identity block ಮೂಲಕ ಬಳಕೆದಾರರು ಬ್ರೌಸ್ ಮಾಡುತ್ತಿರುವ ವೆಬ್ ತಾಣ ಅಧಿಕೃತವೇ? ಫಿಸಿಂಗ್ ಸೈಟ್ ಅಥವಾ ಹ್ಯಾಕರ್ ಗಳ ಜಾಲತಾಣವೇ ಎಂದು ಸುಲಭವಾಗಿ ತಿಳಿದು ಬ್ರೌಸರ್ ಅನ್ನು ಸುರಕ್ಷಿತಗೊಳಿಸಬಹುದು.
* ಫೈರ್ ಫಾಕ್ಸ್ 5 ಗೆ ಹೋಲಿಸಿದರೆ ಟ್ಯಾಬ್ ಗ್ರೂಪಿಂಗ್ ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗಿದೆ.
* ಫೈರ್ ಫಾಕ್ಸ್ ಸಿಂಕ್ ಮೂಲಕ ಡೆಸ್ಕ್ ಟಾಪ್ ಹಾಗೂ ಮೊಬೈಲ್ ಗೆ ಬುಕ್ ಮಾರ್ಕ್, ಹಿಸ್ಟರಿ, ಪಾಸ್ ವರ್ಡ್ ಹಾಗೂ ಇತರೆ ಸೆಟ್ಟಿಂಗ್ ಗಳನ್ನು ಸುಲಭವಾಗಿ ವರ್ಗಾಯಿಸಬಹುದು.
* ಆಂಡ್ರ್ಯಾಯ್ಡ್ ಆವೃತ್ತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಇತರೆ ಬ್ರೌಸರ್ ಗಳಿಗೆ ಹೋಲಿಸಿದರೆ ಶೀಘ್ರವಾಗಿ ಫೈರ್ ಫಾಕ್ಸ್ ಕಾರ್ಯನಿರ್ವಹಿಸುತ್ತದೆ.
* ಸರ್ವರ್ ಹಾಗೂ ಬ್ರೌಸರ್ ಗಳ ನಡುವೆ ಸಂವಹನಕ್ಕೆ ಸೂಕ್ತ ಅವಕಾಶ ಕಲ್ಪಿಸಲಾಗಿದ್ದು ಹಲವು APIಗಳು ಹಾಗೂ ವೆಬ್ ಸಾಕೆಟ್ ಗಳು ವೆಬ್ ಡೆವಲಪರ್ ಗಳಿಗೆ ನೆರವಾಗಲಿದೆ.
ಗೂಗಲ್ ಕ್ರೋಮ್ 13 ಬಿಡುಗಡೆಗೊಂಡ ಕೆಲ ದಿನಗಳಲ್ಲೇ ಫೈರ್ ಫಾಕ್ಸ್ 6 ಬಿಡುಗಡೆಗೊಂಡಿರುವುದು ಪೈಪೋಟಿ ಹೆಚ್ಚಿಸಿದೆ. ಇಂಟರ್ ನೆಟ್ ಎಕ್ಸ್ ಪ್ಲೋರರ್ malware ಗಳ ಕಾಟ ತಡೆಗಟ್ಟುವಲ್ಲಿ ಅಗ್ರಸ್ಥಾನ ಗಳಿಸಿರುವುದು ಫೈರ್ ಫಾಕ್ಸ್ ಗೆ ಎಚ್ಚರಿಕೆ ಗಂಟೆಯಾಗಿದ್ದರೂ ಫೈರ್ ಫಾಕ್ಸ್ 6 ರಲ್ಲಿ ಹೆಚ್ಚಿನ ಸುರಕ್ಷತೆ ಕಲ್ಪಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಫೈರ್ ಫಾಕ್ಸ್ 6 ಡೌನ್ ಲೋಡ್ ಮಾಡಿಕೊಳ್ಳಿ.











Click it and Unblock the Notifications