ಬ್ಯೂಟಿ ಪಾರ್ಲರ್ ಮುಖವಾಡದ ವೇಶ್ಯಾವಾಟಿಕೆ: ರೇಡ್
ಮುಂಬೈ,
ಆಗಸ್ಟ್ 17: ಇಲ್ಲಿನ ಭಾಯಂದರ್ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್ ಮುಸುಕಿನಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದ ನಾಲ್ಕು ಕೇಂದ್ರಗಳ ಮೇಲೆ ಕ್ರೈಂ ಬ್ರ್ಯಾಂಚ್ ಪೊಲೀಸರು ವೀಕೆಂಡ್ ಶನಿವಾರದಂದು ದಾಳಿ ನಡೆಸಿದ್ದು, 11 ಯುವತಿಯರನ್ನು ಬಂಧಿಸಿದ್ದಾರೆ. ಇದೇ ವೇಳೆ, ಹಲವು ಗ್ರಾಹಕರನ್ನೂ ಬಂಧಿಸಲಾಗಿದೆ. id="toptextpromo">ಐನಾತಿ
ವೇಶ್ಯಾವಾಟಿಕೆ ಕೇಂದ್ರಗಳಾಗಿಯೇ ಕಾರ್ಯನಿರ್ವಹಿಸುತ್ತಿದ್ದ ನಾಲ್ಕೂ ಬ್ಯೂಟಿ ಪಾರ್ಲರಗಳು ಮಸಾಜ್ ಹೆಸರಿನಲ್ಲಿ ಪುರುಷ ಗ್ರಾಹಕರಿಗೆ ಲೈಂಗಿಕ ಸುಖ ನೀಡುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಇಂದಿರಾ ಮಾರ್ಕೆಟ್ ಪ್ರದೇಶದ ಶೃಂಗಾರ್, ಡಯಾನಾ, ಗ್ಲೋ ಮತ್ತು ಲೋಟಸ್ ಬ್ಯೂಟಿ ಪಾರ್ಲರ್ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ ವೀಕೆಂಡ್ ಮೋಜು ಮಸ್ತಿ ಭರಪೂರವಾಗಿ ನಡೆದಿತ್ತು ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಡಯಾನಾ
ಪಾರ್ಲರ್ ಬೊರಿವಿಲಿ ಪ್ರದೇಶದಲ್ಲಿ ಶಾಖೆಯನ್ನು ಹೊಂದಿದ್ದು, ಅದರ ಮೇಲೂ ಇತ್ತೀಚೆಗೆ ಪೊಲೀಸರು ರೇಡ್ ಮಾಡಿದ್ದರು. ಮಧ್ಯರಾತ್ರಿಯಾದರೂ ಕಾರ್ಯನಿರ್ವಹಿಸುತ್ತಿದ್ದ ಈ ಕೇಂದ್ರಗಳ ಬಗ್ಗೆ ಅನುಮಾನ ಬಂದು ಸ್ಥಳೀಯರು ಪೊಲೀಸರಿಗೆ ಸುಳಿವು ನೀಡಿದ್ದರು. ಭಾರತೀಯ ದಂಡ ಸಂಹಿತೆ ಸೆಕ್ಷನ್ 110 ಮತ್ತು ಸೆಕ್ಷನ್ 112 ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications