ದಯವಿಟ್ಟು ಈ ಸಂಖ್ಯೆಗಳಿಗೆ ಕರೆ ಮಾಡಬೇಡಿ: ಬಿಎಸ್ಸೆನ್ನೆಲ್

ಮಾಲ್ಡೀವ್ಸ್, ನೈಜೀರಿಯಾ, ಡಿಯಾಗೋ ಗಾರ್ಸಿಯಾ ಹಾಗೂ ಸಾವೊ ಟೊ ಮುಂತಾದೆಡೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಿದರೆ ಭಾರಿ ಮೊತ್ತದ ಹಣ ನಿಮ್ಮ (ಪ್ರೀಪೇಯ್ಡ್/ಪೋಸ್ಟ್ ಪೇಯ್ಡ್) ಖಾತೆಯಿಂದ ಕಟ್ ಆಗುತ್ತದೆ.
ಅದರಲ್ಲೂ ಪ್ರೀಪೇಯ್ಡ್ ಗ್ರಾಹಕರಿಗೆ ಇದೂ ಹೆಚ್ಚಾಗಿ ಹೊರೆಯಾಗಲಿದೆ. +246, 239, 234 ಹಾಗೂ 960 ಸಂಖ್ಯೆಗಳಿಂದ ಶುರುವಾಗುವ ಮೊಬೈಲ್ ನಂಬರ್ ಗಳನ್ನು ಡಯಲ್ ಮಾಡಿದರೆ ನಿಮ್ಮ ಅಕೌಂಟ್ ನಲ್ಲಿರುವ ಬ್ಯಾಲೆನ್ಸ್ ಕ್ಷಣಾರ್ಧದಲ್ಲೇ 'ನಿಲ್' ಆದರೂ ಅಚ್ಚರಿಪಡಬೇಕಾಗಿಲ್ಲ ಎಂದು ಬಿಎಸ್ ಎನ್ ಎಲ್ ಎಚ್ಚರಿಸಿದೆ.
ಈ ಸಂಖ್ಯೆಗಳಿಂದ ಮಿಸ್ ಕಾಲ್ ಅಥವಾ ಕಾಲ್ ಬಂದರೆ ಎಚ್ಚರಿಕೆ ವಹಿಸಿ ಇಲ್ಲದೆ ಪ್ರತಿ ಕರೆಗೂ ಕನಿಷ್ಹ 10 ರಿಂದ 10 ರು ಪ್ರತಿ ನಿಮಿಷದಂತೆ ಹೆಚ್ಚುವರಿಯಾಗಿ ನಿಮ್ಮ ಖಾತೆಯಿಂದ ಹಣ ಪೋಲಾಗುತ್ತದೆ. ಈ ಸಂಖ್ಯೆಗಳು ಅನಧಿಕೃತವಾಗಿದ್ದು, ಈ ರೀತಿಯ ಅನಾಧೇಮಯ ಕರೆಗಳನ್ನು ಸ್ವೀಕರಿಸಿ ಅಥವಾ ರೀ ಡಯಲ್ ಮಾಡಿ ಹಣ ಕಳೆದುಕೊಳ್ಳಬೇಡಿ ಎಂದು ಬಿಎಸ್ ಎನ್ ಎಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.












Click it and Unblock the Notifications