ಸ್ವಾತಂತ್ರ್ಯದ ಸವಿ: ಗೂಗಲ್ ನಲ್ಲಿ ಲೇಡಿ ಗಾಗಾಗೆ ಬೆವರಿಳಿಸಿದ ಅಣ್ಣಾ

anna-hazare-just-behind-lady-gaga
ನವದೆಹಲಿ, ಆ.12: ಮತ್ತೊಂದು ಸುತ್ತಿನ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳಲು ಸಜ್ಜಾಗುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ದೇಶಪ್ರೇಮಿಗಳಿಗೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸವಿ ಸುದ್ದಿಯೊಂದನ್ನು ನೀಡಿದ್ದಾರೆ.

ವಿಷಯ ಏನಪಾ ಅಂದರೆ ಲೇಡಿ ಗಾಗಾ ಎಂಬ ಅಂತಾರಾಷ್ಟ್ರೀಯ ಪಾಪ್ ಸಂಗೀತ ಮಹಾರಾಣಿ ನಮ್ಮ ಅಣ್ಣಾರನ್ನು ಹಿಂದಿಕ್ಕಲು ಸಾಕಷ್ಟು ಶ್ರಮಪಟ್ಟಿದ್ದಾಳೆ. ಅಣ್ಣಾಗೆ ಪೈಪೋಟಿ ನೀಡಲು ಗಾಗಾ ಸಹ ಉಪವಾಸ ಕುಳಿತಳಾ ಎಂದು ಕೇಳಬೇಡಿ. ಕಂಪ್ಯೂಟರ್ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಾಟ ಭಾಗ್ಯ ಗಾಗಾಳನ್ನು ಹುಡುಕಿಕೊಂಡು ಬಂದಿದೆ. ಅಣ್ಣಾ ಎಡರನೇ ಸ್ಥಾನದಲ್ಲಿದ್ದಾರೆ!

ಗೂಗಲ್ ಸರ್ಚ್ ಎಂಜಿನ್ ನಲ್ಲಿ ಇತ್ತೀಚೆಗೆ ಭಾರತದಲ್ಲಿ ಲೇಡಿ ಗಾಗಾಗಾಗಿ ಹುಡುಕಾಟ ಅತ್ಯಧಿಕವಾಗಿದೆಯಂತೆ. ಏನಪಾ ಇದು 25ರ ಪಾಪ್ ಚೆಲುವೆ ಎಲ್ಲಿ, 70 ದಾಟಿರುವ ಅಣ್ಣಾಗೆ ಈಕೆಯ ಹೋಲಿಕೆ ಯಾಕೆ ಎಂದು ಕೇಳಬೇಡಿ. ಏಕೆಂದರೆ ಇದಕ್ಕೆ ಕಾರಣವೂ ಇದೆ.

ವಿಶ್ವದ ನಂಬರ್ 1 ಪಾಪ್ ಗಾಯಕಿ ಲೇಡಿ ಗಾಗಾ ಅಕ್ಟೋಬರಿನಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದಾಳೆ. ಈ ಮುನ್ನೆಲೆಯಲ್ಲಿ ಭಾರತೀಯರು ಗಾಗಾಗಾಗಿ ಇಂಟರ್ನೆಟ್‌ನಲ್ಲಿ ತಡಕಾಡುತ್ತಿದ್ದಾರೆ.
ಹರಿಯಾಣಾ, ಕೇರಳ ಮತ್ತು ಮಧ್ಯಪ್ರದೇಶದ ಜನ ಹೆಚ್ಚಾಗಿ ಗಾಗಾಳನ್ನು ಶೋಧಿಸಿದ್ದಾರೆ. ಒಟ್ಟಾರೆಯಾಗಿ, ಗಾಗಾ ಮತ್ತು ಅಣ್ಣಾ ಇಬ್ಬರಿಗೂ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಜನ ಹೆಚ್ಚಾಗಿ ಹುಡುಕಿದ್ದಾರೆ.

Google Trends ಪ್ರಕಾರ ಇಬ್ಬರಿಗೂ neck-to-neck competition ನಡೆದಿದೆ. ಲೇಡಿ ಗಾಗಾಗಾಗಿ Lady Gaga songs, Lady Gaga India, Judas ಎಂದು ಹುಡುಕಿದ್ದರೆ ಅಣ್ಣಾ ಹಜಾರೆ ಅವರಿಗಾಗಿ Corruption, Anna Hazare Corruption, Anti- corruption, India Against corruption ಎಂದೆಲ್ಲ ತಡಕಾಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ನೆಟಿಜನರು ಅಣ್ಣಾರನ್ನು ಹುಡುಕುತ್ತಿದ್ದಾರೆ. ಸ್ವಾತಂತ್ರ್ಯೋತ್ಸವದ ಮುನ್ನಾ ಸಂದರ್ಭದಲ್ಲಿ Mahatma Gandhi ಹೆಸರು ಹೆಚ್ಚು ಚಾಲ್ತಿಗೆ ಬಂದಿದೆ. ಇನ್ನು ಇದೇ ಅಂತರ್ಜಾಲದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿ ನೆಟಿಜನರಲ್ಲಿ ದೇಶ ಪ್ರೇಮ ಹೆಚ್ಚಾಗಿ ಉಕ್ಕಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+