ಲಿಬರ್ಟಿ ಪ್ರತಿಮೆ ದರ್ಶನಕ್ಕೆ ಒಂದು ವರ್ಷ ನಿರ್ಬಂಧ

Literty statue to close for year
ನ್ಯೂಯಾರ್ಕ್, ಆ. 11 : 125 ವರ್ಷ ಹಳೆಯ, 305 ಅಡಿ ಎತ್ತರವಿರುವ ಅಮೆರಿಕಾದ ಹೆಮ್ಮೆಯ ಲಿಬರ್ಟಿ ಪ್ರತಿಮೆ ದುರಸ್ತಿಗೆ ಬಂದಿರುವ ಕಾರಣ ಇನ್ನು ಒಂದು ವರ್ಷಗಳ ಕಾಲ ಸಾರ್ವಜನಿಕ ಸಂದರ್ಶನಕ್ಕೆ ಲಭ್ಯವಾಗುತ್ತಿಲ್ಲ. ಆದರೆ, ಲಿಬರ್ಟಿ ದ್ವೀಪ ಪ್ರವೇಶಕ್ಕೆ ಮುಕ್ತವಾಗಿರುತ್ತದೆ.

ಫ್ರಾನ್ಸ್ ನಿಂದ ಉಡುಗೊರೆಯಾಗಿ ಬಂದ ಈ ಕಂಚಿನ ಪ್ರತಿಮೆಯನ್ನು 1886ರಲ್ಲಿ ಸ್ಥಾಪಿಸಲಾಗಿತ್ತು. ಸಾಕಷ್ಟು ಮಳೆ, ಗಾಳಿ, ಬಿಸಿಲನ್ನು ಕಂಡಿರುವ ಪ್ರತಿಮೆಯ ರಿಪೇರಿಗೆ 27.5 ಮಿಲಿಯನ್ ಡಾಲರ್ ವೆಚ್ಚ ತಗಲುತ್ತದೆಂದು ಅಂದಾಜಿಸಲಾಗಿದೆ.

9/11ರ ಭಯೋತ್ಪಾದಕ ದಾಳಿಯ ನಂತರ ಅದರ ಮೇಲೆ ಹತ್ತುವುದನ್ನು ನಿರ್ಬಂಧಿಸಲಾಗಿತ್ತು. ಉಗ್ರರ ದಾಳಿಯ ಬಿಸಿ ಕಡಿಮೆಯಾದ ನಂತರ ಪ್ರತಿಮೆ ಹತ್ತುವುದಕ್ಕೆ ಅವಕಾಶ ನೀಡಲಾಗಿತ್ತು. ಈಗ ಹೊಸ ಏಣಿ ಮತ್ತು ಎಲಿವೇಟರ್ ಗಳನ್ನು ಅಳವಡಿಸಲಾಗುತ್ತಿದೆ.

125ನೇ ವಾರ್ಷಿಕೋತ್ಸವವನ್ನು ಅಕ್ಟೋಬರ್ 29ರಂದು ಆಚರಿಸಿದ ಮರುದಿನದಿಂದ ಲಿಬರ್ಟಿ ಪ್ರತಿಮೆ ಸಂದರ್ಶನಕ್ಕೆ ಲಭ್ಯವಾಗುವುದಿಲ್ಲ ಎಂದು ದುರಸ್ತಿಯ ಹೊಣೆಗಾರಿಕೆಯನ್ನು ವಹಿಸಿಕೊಂಡಿರುವ ನ್ಯಾಷನಲ್ ಪಾರ್ಕ್ ಸರ್ವೀಸ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+