ಸೆಕ್ಯುರಿಟಿ ಗಾರ್ಡುಗಳಿಂದ ದಿಲ್ಲಿ ವಿವಿ ವಿದ್ಯಾರ್ಥಿನಿಯ ಮಾನಭಂಗ

ವಿಷಯ ಏನೆಂದರೆ ಸದರಿ ವಿದ್ಯಾರ್ಥಿನಿಯು ತನ್ನ ಗೆಳೆಯನೊಂದಿಗೆ ಏಕಾಂತದಲ್ಲಿರುವ ಈ ಸೆಕ್ಯುರಿಟಿ ಗಾರ್ಡುಗಳ ಕಣ್ಣಿಗೆ ಬಿದ್ದಿದೆ. ಸರಿ ಅವಳನ್ನು ಬೆದರಿತೊಡಗಿದ್ದಾರೆ. ಗೆಳೆಯನ ಜತೆಯಿರುವ ಫೋಟೋ ತೆಗೆದಿದ್ದೇವೆ. ಅದನ್ನು ಬಹಿರಂಗಪಡಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆ. ರಾಕೇಶ್ ಮತ್ತು ಹರಕೇಶ್ ಎಂಬ ಗಾರ್ಡುಗಳು ಈಗ ಜೈಲುಪಾಲಾಗಿದ್ದಾರೆ. ಭರತ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಧಿತ ವಿದ್ಯಾರ್ಥಿನಿ ಸ್ನೇಹಾ ಉತ್ತರ ದೆಹಲಿಯ ನಿರಂಕಾರಿ ಕಾಲನಿಯಲ್ಲಿ ವಾಸವಾಗಿದ್ದಾಳೆ. ಘಟನೆ ಆಗಸ್ಟ್ 6ರಂದು ನಡೆದಿದೆ. ಕ್ಲಾಸು ಮುಗಿದ ನಂತರವೂ ಸ್ನೇಹಾ ತನ್ನ ಗೆಳೆಯನೊಂದಿಗೆ ಕ್ಲಾಸ್ ರೂಮಿನಲ್ಲೇ ಉಳಿದುಕೊಂಡಿದ್ದಾಳೆ. ಇದನ್ನು ದೂರದಿಂದಲೇ ಗಮನಿಸಿದ ಗಾರ್ಡುಗಳು ರೂಮಿನೊಳಕ್ಕೆ ಧಾವಿಸಿ, ಇಲ್ಲೇನು ಮಾಡುತ್ತಿದ್ದೀರಿ ಎಂದೆಲ್ಲ ಪ್ರಶ್ನಿಸತೊಡಗಿದ್ದಾರೆ. ಇವರೂ ಏನೂ ಉತ್ತರಿಸದೆ ತಡವರಿಸಿದ್ದಾರೆ.
ಅದನ್ನೇ ಬಂಡವಾಳ ಮಾಡಿಕೊಂಡ ಗಾರ್ಡುಗಳು ವಿಷಯವನ್ನು ಪ್ರಿನ್ಸಿಪಾಲ್‌ಗೆ ತಿಳಿಸುವುದಾಗಿ ಬೆದರಿಸಿದ್ದಾರೆ. ಒಂದು ಹಂತದಲ್ಲಿ, ವಿಷಯ ಮುಚ್ಚಿಡುತ್ತೇವೆ. 2,000 ರುಪಾಯಿ ಕೊಡಿ ಎಂದು ಇಬ್ಬರನ್ನೂ ಪೀಡಿಸಿದ್ದಾರೆ. ತಕ್ಷಣ, ಸ್ನೇಹಾ ತನ್ನಲ್ಲಿದ್ದ 200 ರು. ಕೊಟ್ಟು ದಮ್ಮಯ್ಯ ಈ ವಿಷಯವನ್ನು ಯಾರಿಗೂ ಹೇಳಬೇಡಿ. ಉಳಿದ ಹಣ ಮಾರನೆಯ ದಿನ ತಂದುಕೊಡುವುದಾಗಿ ಗೋಗರೆದಿದ್ದಾಳೆ.
ಆದರೆ ಬೇರೆಯದೇ ಸ್ಕೆಚ್ ಹಾಕಿದ ಗಾರ್ಡುಗಳು ಮೊದಲು ಸ್ನೇಹಾಳ ಸಹಪಾಠಿಯನ್ನು ಹೊರಕ್ಕೆ ಕಳಿಸಿ, ಸ್ನೇಹಾಳ ಮಾನಭಂಗ ಮಾಡಿದರು. ಮಾರನೆಯ ದಿನ ಸ್ನೇಹಾ ಕ್ಲಾಸ್ ರೂಮಿಲ್ಲಿ ನಡೆದ ಘಟನೆಯನ್ನು ಪ್ರಿನ್ಸಿಪಾಲ್‌ಗೆ ವಿವರಿಸಿದ್ದಾಳೆ. ಪ್ರಿನ್ಸಿಪಾಲ್‌ರ ಸಲಹೆಯಂತೆ ಪೊಲೀಸರಿಗೂ ದೂರು ನೀಡಿದ್ದಾಳೆ. ಆರೋಪಿಗಳಿಬ್ಬರನ್ನೂ ಆಗಸ್ಟ್ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.











Click it and Unblock the Notifications