ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾತಗುಣಿ ಎಸ್ಟೇಟ್ ಆಸ್ತಿ ಸರಕಾರದ ಅಧೀನಕ್ಕೆ ಕೋರ್ಟ್ ಅಸ್ತು

By Srinath
|
Google Oneindia Kannada News

Devikarani Roerich Estate acquisition ok Supreme Court
ನವದೆಹಲಿ, ಆ.9: ಬೆಂಗಳೂರು ಸಮೀಪ ನಟಿ ದೇವಿಕಾರಾಣಿ ರೋರಿಚ್ ಮತ್ತು ಆಕೆಯ ಪತಿ ಸ್ವೆತಸ್ಲಾವ್ ರೋರಿಚ್ ಅವರ ತಾತಗುಣಿ ಎಸ್ಟೇಟ್ ಆಸ್ತಿ ವಶ ಪಡಿಸಿಕೊಂಡಿರುವ ಕರ್ನಾಟಕದ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಎಸ್ಎಚ್ ಕಪಾಡಿಯಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ಆದೇಶ ನೀಡಿದ್ದು, ಸಾರ್ವಜನಿಕ ಉದ್ದೇಶದಿಂದ ಆಸ್ತಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಂವಿಧಾನದ ಕಲಂ 300ಎ ವ್ಯಾಪ್ತಿ ಮತ್ತು ಸಾಂದರ್ಭಿಕ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ.

ರೋರಿಚ್ ದಂಪತಿ ಆಸ್ತಿ ವಶಪಡಿಸಿಕೊಂಡಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಕೆ.ಟಿ. ಪ್ಲಾಂಟೇಷನ್, ಮೇರಿ ಜಾಯ್ಸ್ ಪೂಣಚ್ಚ ಮತ್ತು ಇತರರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಮುಕುಂದಕಂ ಶರ್ಮ, ಕೆ.ಎಸ್.ರಾಧಾಕೃಷ್ಣನ್, ಸ್ವತಂತ್ರ ಕುಮಾರ್ ಮತ್ತು ಅನಿಲ್ ಆರ್ ದವೆ ಅವರನ್ನು ಒಳಗೊಂಡ ಸಂವಿಧಾನ ಪೀಠ ಅಂತಿಮ ತೀರ್ಪು ನೀಡಿದೆ.

English summary
Tataguni Estate Karnataka Govt Acquisition Upheld: The Supreme Court has upheld today (Aug 09) the acquisition of properties owned by legendary film actress Devika Rani and her husband near Bangalore by Karnataka Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X