ಲಾಲ್ ಬಾಗ್ ಹೂತೋಟಕ್ಕೆ ಹೋಗುವ ಮುನ್ನ...
ಬೆಂಗಳೂರು,
ಆ. 8 : ಸಸ್ಯಕಾಶಿ ಲಾಲ್ ಬಾಗಿನಲ್ಲಿ ಪ್ರತಿ ವರ್ಷದಂತೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಬಗೆಬಗೆಯ ಹೂವುಗಳು ಅರಳಿ ನಿಂತಿವೆ. ಆ.7ರಿಂದ ಪ್ರಾರಂಭವಾಗಿರುವ ಫಲಪುಷ್ಪ ಪ್ರದರ್ಶನ ಆಗಸ್ಟ್ 15ರವರೆಗೆ ನಡೆಯಲಿದೆ. id="toptextpromo">ಧೋಧೋ
ಸುರಿವ ಮಳೆಯಲ್ಲಿಯೂ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಉತ್ಸಾಹದ ಜನಸಾಗರವೇ ಲಾಲ್ ಬಾಗ್ ನತ್ತ ಹರಿಯುತ್ತಿದೆ. ಪ್ರವೇಶ ದರವನ್ನು ವಾರದ ದಿನಗಳಲ್ಲಿ 30 ರು. ಮತ್ತು ವಾರಾಂತ್ಯದಲ್ಲಿ 40 ರು. ಎಂದು ನಿಗದಿಪಡಿಸಲಾಗಿದೆ. ಐದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಕೇವಲ 10 ರು. id='are-slot-1' class='oiad oi-axt oiadv'> id='top-searched-articles'>ಲಾಲ್
ಬಾಗಿಗೆ ಹೋಗುವ ಮುನ್ನ ಹೂತೋಟದಲ್ಲಿ ಎಂತೆಂಥ ಹೂಗಳು ಅರಳಿ ನಿಂತಿವೆ ಎಂದು ಇಲ್ಲಿ ನೋಡಿರಿ. ಒಂದು ಸಾರಿ ಗ್ಯಾಲರಿ ವೀಕ್ಷಿಸಿದರೆ ಲಾಲ್ ಬಾಗಿಗೆ ಮಕ್ಕಳು ಹೆಂಡತಿಯೊಂದಿಗೆ ಹೋಗಲು ಮನಸ್ಸಾಗದಿದ್ದರೆ ಕೇಳಿ. ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಪ್ರದರ್ಶನದಲ್ಲಿ ಹೂಗಳ 250ಕ್ಕೂ ಹೆಚ್ಚು ಪ್ರಭೇದಗಳು ಆಕರ್ಷಣೆಯ ಕೇಂದ್ರಬಿಂದುವಾಗಲಿವೆ. [ಲಾಲ್ ಬಾಗ್ ಪುಷ್ಪ ಪ್ರದರ್ಶನದ ಚಿತ್ರಗಳು]











Click it and Unblock the Notifications