ಹೈದರಾಬಾದ್, ಆ. 8: ಇಲ್ಲಿನ ಅಮೀರ್ ಪೇಟೆಯಲ್ಲಿರುವ ಲೇಡೀಸ್ ಹಾಸ್ಟೆಲಿನಲ್ಲಿ ಕಳೆದ ವಾರ 21 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕರ್ನೂಲಿನ ನಾಗಭೂಷಣಂ ಅವರ ಪುತ್ರಿ ಉಮಾ ಮಹೇಶ್ವರಿ ಮೃತ ದುರ್ದೈವಿ.
ಹಾಸ್ಟೆಲಿನಲ್ಲಿ ಉಮಾ ವಿಷ ಸೇವಿಸಿರುವುದು ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಮೃತಪಟ್ಟಳು. ಉಮಾ ಕೌಟುಂಬಿಕ ಸಮಸ್ಯೆಗಳಿಂದ ನೊಂದಿದ್ದಳು ಎಂದು ಸಂಜೀವ ರೆಡ್ಡಿ ನಗರ ಠಾಣೆಯ ಪೊಲೀಸರು ಹೇಳಿದ್ದಾರೆ.
A 21 year old girl, Uma Maheshwari, ended her life by consuming poison in a ladies hostel under Sanjeeva Reddy Nagar police station limits on Aug 5. She is believed to have taken the extreme step distraught by family problems.