ಅತ್ಯಾಚಾರ ಆರೋಪ ಸಹಿಸದೆ ದಲಿತ ಯುವಕ ಆತ್ಮಹತ್ಯೆ
ಗಾಜಿಯಾಬಾದ್,
ಆ.8: ಇಲ್ಲಿನ ಗ್ರಾಮವೊಂದರಲ್ಲಿ ದಲಿತ ಯುವಕನ ಮೇಲೆ ಸುಳ್ಳು ಆತ್ಯಾಚಾರ ಆರೋಪ ಹೊರಿಸಿ, ಅವನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದಂಪತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. id="toptextpromo">23
ವರ್ಷದ ಸೋನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ. ದೊಮಾಯಿ ಗ್ರಾಮದಲ್ಲಿ ಆಗಸ್ಟ್ 3ರಂದು ಸೋನು ತನ್ನ ಮೇಲೆ ಅತ್ಯಾಚಾರವೆಸಗಿದ ಎಂದು ರೇಖಾ (40) ಮತ್ತು ಅವಳ ಗಂಡ ಆರೋಪಿಸಿದ್ದರು. ಇದರಿಂದ ನೊಂದು ಸೋನು ಆತ್ಮಹತ್ಯೆಗೆ ಶರಣಾಗಿದ್ದ. id='are-slot-1' class='oiad oi-axt oiadv'> id='top-searched-articles'>ಸೋನು
ಸಾವಿನಿಂದ ಕುಪಿತಗೊಂಡ ಗ್ರಾಮಸ್ಥರು, ಸುಳ್ಳು ಆರೋಪ ಹೊರಿಸಿದ ರೇಖಾ ದಂಪತಿಯನ್ನು ಬಂಧಿಸುವಂತೆ ಪೊಲೀಸರನ್ನು ಆಗ್ರಹಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಪೊಲೀಸರು ದಂಪತಿಯನ್ನು ಬಂಧಿಸಿ, ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.











Click it and Unblock the Notifications