ರೇವ್ ಪಾರ್ಟಿ ಪೊಲೀಸಪ್ಪನ ಮಾದಕ ದ್ರವ್ಯ ಸೇವನೆ ಸಾಬೀತು

ವಿಶೇಷವೆಂದರೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ಹಿರಿಯ ಅಧಿಕಾರಿ ಅನಿಲ್ ಜಾಧವ್ ಸಹ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ತಾಜಾ ಸುದ್ದಿಯೆಂದರೆ ಈ ಅಧಿಕಾರಿಯ ರಕ್ತ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಮಾದಕ ಪದಾರ್ಥ ಇರುವುದು ದೃಢಪಟ್ಟಿದೆ. ಜತೆಗೆ ಪಾರ್ಟಿಗೆ ಸ್ವತಃ ಜಾಧವ್ ಮಾದಕ ದ್ರವ್ಯ ಪೂರೈಸಿದ್ದರು ಎಂಬುದಕ್ಕೂ ಪೊಲೀಸರ ಬಳಿ ಪುರಾವೆಯಿದೆ.
ಪಾರ್ಟಿಯಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ತನಗೆ ಮೂಲವೊಂದರಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಇತರ ಅಧಿಕಾರಿಗಳು ಬರುವ ಮೊದಲೇ ತಾನು ಅಲ್ಲಿಗೆ ಆಗಮಿಸಿದ್ದಾಗಿ ಜಾಧವ್ ಹೇಳಿಕೊಂಡಿದ್ದರು.
ಮುಂಬೈನಿಂದ 100 ಕಿ. ಮೀ. ದೂರದಲ್ಲಿ ಕಾರ್ಜಾತ್ ನಲ್ಲಿರುವ ಹೋಟೆಲ್ ಮೌಂಟ್ ವ್ಯೂನಲ್ಲಿ 'ಬಿಯಾಂಡ್ ಲಾಜಿಕ್' ಎಂಬ ಕಂಪನಿ ರೇವ್ ಪಾರ್ಟಿಯನ್ನು ಆಯೋಜಿಸಿತ್ತು. ಫೇಸ್ ಬುಕ್ ಮೂಲಕ ಯುವಕ, ಯುವತಿಯರಿಗೆ ರೇವ್ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ದಾಳಿಯ ವೇಳೆ ಎಕ್ಸ್ಟಸಿ, ಕೊಕೇನ್ ಮತ್ತು ಇತರ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು.












Click it and Unblock the Notifications