ಮಂಗಳೂರು ರೈಲು ನಿಲ್ದಾಣಕ್ಕೆ ವಿಶ್ವದರ್ಜೆಯ ಟಚ್
ಮಂಗಳೂರು,
ಆ.6 : ಮಂಗಳೂರು ವಿಶ್ವ ದರ್ಜೆಯ ರೈಲು ನಿಲ್ದಾಣ ನಿರ್ಮಿಸಲು ಖಾಸಗಿ ಸಹಭಾಗಿತ್ವ ಅಗತ್ಯವಿದೆ ಎಂದು ರೈಲ್ವೇ ಪಾಲಕ್ಕಾಡು ಡಿವಿಜನಲ್ ಮೆನೇಜರ್ ಎಸ್. ಕೆ. ರೈನಾ ಅವರು ತಿಳಿಸಿದರು. ಅವರು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗ ಮಾತನಾಡುತ್ತಿದ್ದರು. id="toptextpromo">ಮಂಗಳೂರಿನಲ್ಲಿರುವ
ಎರಡು ನಿಲ್ದಾಣಗಳ ಪೈಕಿ ಯಾವುದನ್ನು ವಿಶ್ವ ದರ್ಜೆಯ ಸ್ಥಾನಕ್ಕೆ ಏರಿಸುವುದು ಎನ್ನುವ ಕುರಿತು ಇನ್ನೂ ತೀರ್ಮಾನಿಸಲಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ರೈಲ್ವೇ ಸೇತುವೆ ಇದೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಜಪ್ಪು
ಬಳಿ ರೈಲ್ವೇ ಕೆಳ ಸೇತುವೆ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ಇನ್ನೂ ಹಣ ಠೇವಣಿ ಇಟ್ಟಿಲ್ಲ. ಯೋಜನೆಯ ಒಟ್ಟು ವೆಚ್ಚದ ಶೇ. 2 ಭಾಗ ಹಣವನ್ನು ಪಾಲಿಕೆ ಕಾಯ್ದಿರಿಸಿದ ಕೂಡಲೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಮಂಗಳೂರು ಸೆಂಟ್ರಲ್ ಸ್ಟೇಷನ್‌ನಲ್ಲಿ ಬಂದು ಹೋಗುವ ರೈಲುಗಳ ಸೇವೆಯನ್ನು ವಿಸ್ತರಿಸಲು ಒಂದು ಹೆಚ್ಚುವರಿ ಫ್ಲಾಟ್‌ಫಾರಂ ಅಗತ್ಯವಿದೆ ಎಂದೂ ಅವರು ನುಡಿದರು.











Click it and Unblock the Notifications