ವಾರಾಂತ್ಯ ಕಳೆಯೋಕೆ ಬರ್ತೀಯಾ ಡಾರ್ಲಿಂಗ್?

Love SMS sent to husband, Wife lands in trouble
ಲಂಡನ್, ಆ. 6 : "ಬರ್ಮಿಂಗ್ ಹ್ಯಾಮ್ ನಲ್ಲಿರುವ ಮರಿಯೊಟ್ ಹೊಟೇಲಿನಲ್ಲಿ ಇನ್ನೊಂದು ವಾರಾಂತ್ಯದ ರಾತ್ರಿ ಕಳೆಯೋಕೆ ಬರ್ತೀಯಾ ಡಾರ್ಲಿಂಗ್?" ಅಂತ ಪ್ರೇಮತುಂಬಿದ ಮಧುರ ಸಂದೇಶವನ್ನು ಮೊಬೈಲ್ ಮುಖಾಂತರ ಕಳಿಸಬೇಕಾದುದ್ದುದು ಪ್ರಿಯಕರನಿಗೆ. ಆದರೆ, ಹೋಗಿದ್ದು ಸಾಕ್ಷಾತ್ ಪತಿದೇವನಿಗೆ!

ಈ ರೀತಿಯ ತಪ್ಪು ಆಯ್ಕೆಯಿಂದಾಗಿ ಗಂಡನಿಂದ ಗಂಡಾಂತರಕ್ಕೆ ಒಳಗಾಗಿರುವವಳು ಲಂಡನ್ನಿನ ನರ್ಸ್ ವಿಕ್ಟೋರಿಯಾ ಸ್ಟೇಸಿ. ಸಂದೇಶ ನೋಡಿ ಕೆಂಡಾಮಂಡಲವಾಗಿರುವ ವೈದ್ಯ ಪತಿ ಸೈಮನ್ ಸ್ಟೇಸಿ ದಾಂಪತ್ಯದ್ರೋಹ ಮಾಡಿದ ಹೆಂಡತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಆತನೂ ತೊಂದರೆಗೊಳಗಾಗಿದ್ದಾನೆ.

ವಿಕ್ಟೋರಿಯಾ ಕೂಡ ಚಕ್ಕಂದವಾಡುತ್ತಿರುವುದು ತನ್ನ ಗೆಳತಿಯ ಗಂಡನೊಂದಿಗೆ. ಹೀಗೆ ತನ್ನ ಗಂಡನಿಗೂ, ಸ್ನೇಹಿತೆಗೂ ಮೋಸ ಮಾಡಿ, ಒಂದೇ ಏಟಿಕೆ ಎರಡು ಹಕ್ಕಿಗಳನ್ನು ಉರುಳಿಸಿರುವ ಇಬ್ಬರು ಮುದ್ದುಮಕ್ಕಳ ತಾಯಿಯಾಗಿರುವ ವಿಕ್ಟೋರಿಯಾ ಈಗ ಕೋರ್ಟ್ ಮೆಟ್ಟಲೇರಿದ್ದಾರೆ. ನ್ಯಾಯ ಒದಗಿಸಿಕೊಡಿ ಎಂದು ಅಂಗಲಾಚುತ್ತಿದ್ದಾಳೆ.

ಮೊಬೈಲ್ ಹೊಸದಾಗಿದ್ದರಿಂದ ಅದನ್ನು ಬಳಸಲು ಬರದೆ ಹೀಗೆ ತಪ್ಪಾಗಿದೆ. ಗಂಡ ಮೊದಲಿನಿಂದಲೂ ದಬ್ಬಾಳಿಕೆ ನಡೆಸುತ್ತಿದ್ದರಿಂದ ಬೇರೆಯವರೊಂದಿಗೆ ಸ್ನೇಹ ಬೆಳೆಸಿದೆ ಎಂದು ನ್ಯಾಯಾಲಯಕ್ಕೆ ವಿಕ್ಟೋರಿಯಾ ತಿಳಿಸಿದ್ದಾಳೆ.

ತಪ್ಪು ಯಾರದ್ದು? ಅನ್ಯರ ಸ್ನೇಹ ಬೆಳೆಸಿದ ಹೆಂಡತಿಯದಾ? ಪತ್ನಿಯನ್ನು ಪ್ರೀತಿಯಿಂದ ನೋಡದ ಗಂಡನದಾ? ಅಥವಾ ವಿಕ್ಟೋರಿಯಾಳನ್ನೇ ಕನ್ ಫ್ಯೂಸ್ ಮಾಡಿದ ಹೊಸ ಮೊಬೈಲಿನದಾ? ನೀವೇ ಹೇಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+