ಎಂಎಂಸ್ ಡಿಲೀಟ್ ಮಾಡ್ತೀನಿ ಎಂದ, ಆದ್ರೆ ಮಾನ ಹಾಳು ಮಾಡ್ದ

ದರ್ಜಿ ಅಂಗಡಿಗೆ ಬಂದಿದ್ದ 16ರ ಹರೆಯ ಹುಡುಗಿಗೆ ಮರಳು ಮಾಡಿ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿದ ಇಬ್ಬರು ಆರೋಪಿಗಳು ಆಕೆಗೆ ಕರೆ ಮಾಡಿ ಕಾಡಿಗೆ ಬಾ ಇಲ್ಲದಿದ್ದರೆ ನಿನ್ನ ಮಾನ ಹರಾಜು ಹಾಕುತ್ತೇವೆ ಎಂದು ಹೆದರಿಸಿದ್ದಾರೆ.
ಎಂಎಂಎಸ್ ಹಾವಳಿಗೆ ಬೆದರಿದ ಹುಡುಗಿ ಕಾಡಿಗೆ ಬಂದಿದ್ದಾಳೆ. ಎಂಎಂಎಸ್ ಆನ್ನು ಡಿಲೀಟ್ ಮಾಡುತ್ತೇವೆ ಎಂದು ಹೇಳಿದ ಇಬ್ಬರು ಆರೋಪಿಗಳು ಆಕೆ ಮೇಲೆ ಎರಗಿ ಅತ್ಯಾಚಾರ ಎಸೆಗಿದ್ದಾರೆ. ನಂತರ 'ಇದೇ ರೀತಿ ಕರೆದಾಗ ಬರಬೇಕು, ಯಾರಿಗಾದರೂ ಹೇಳಿದರೆ ಪ್ರಾಣ ತೆಗೆಯುತ್ತೇವೆ' ಎಂದು ಹೆದರಿಸಿದ್ದಾರೆ.
ಹುಡುಗಿಯ ಶೀಲಹರಣವಾಗಿರುವುದನ್ನು ಖಚಿತಪಡಿಸಿಕೊಂಡ ಮನೆಯವರು, ಪೊಲೀಸರ ಮೊರೆ ಹೊಕ್ಕಿದ್ದಾರೆ. ಷಣ್ಮುಖ ಮತ್ತು ಮಹೇಶ್ ಎಂಬುವರ ಮೇಲೆ ಆರೋಪ ಹೊರೆಸಲಾಗಿದ್ದು, ಹೊಸನಗರ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ.












Click it and Unblock the Notifications