ವ್ಯಾಪಾರದಲ್ಲಿ ಕಲಹ: ಸೋದರರಿಂದ ಅತ್ಯಾಚಾರ

ಗಂಡನಿಂದ ದೂರವಾದ ಸಂತ್ರಸ್ತ ಮಹಿಳೆಯ ಜತೆ ಈ ಸೋದರರಿಬ್ಬರೂ ವ್ಯಾಪಾರ ಸಂಬಂಧ ಹೊಂದಿದ್ದರು. ಯಮುನಾ ಸೇತುವೆಯ ಕೆಳಗೆ ನಿರ್ಜನ ಪ್ರದೇಶಕ್ಕೆ ಮಹಿಳೆಯನ್ನು ಬೈಕಿನಲ್ಲಿ ಅಪಹರಿಸಿದ ಸೋದರರು ಬುಧವಾರ ರಾತ್ರಿ (ಜುಲೈ 27) ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ವೈದ್ಯಕೀಯ ಪರೀಕ್ಷೆಯಿಂದ ಿದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳೊಂದಿಗೆ ಜೀವಿಸುತ್ತಿದ್ದ ಮಹಿಳೆಯು ಆರೀಫ್ ಜತೆ ಮೊದಲು ವ್ಯಾಪಾರ ಶುರುವಿಟ್ಟುಕೊಂಡಳು. ಅದಕ್ಕಾಗಿ 1.5 ಲಕ್ಷ ರುಪಾಯಿಯನ್ನೂ ನೀಡಿದ್ದಳು. ವ್ಯಾಪಾರ ಕೈಕೊಟ್ಟ ಮೇಲೆ ನನ್ನ ಹಣ ವಾಪಸ್ ಮಾಡು ಎಂದು ಮಹಿಳೆಯು ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಒಂದು ಲಕ್ಷ ರುಪಾಯಿಯನ್ನು ಆರೀಫ್ ವಾಪಸ್ ಮಾಡಿದನಾದರೂ ಉಳಿದ ಹಣ ನೀಡಲು ಹಿಂದೇಟು ಹಾಕಿದ.
ಹಣ ವಾಪಸ್ ನೀಡಲೇಬೇಕು ಎಂದು ಗಂಟುಬಿದ್ದಾಗ ಉಪಾಯ ಮಾಡಿದ ಆರೀಫ್, ಹಣ ಕೊಡ್ತೀನಿ ಬಾ ಎಂದು ಬೈಕಿನಲ್ಲಿ ಕರೆದೊಯ್ದ. ಮಾರ್ಗ ಮಧ್ಯೆ ತಮ್ಮನನ್ನೂ ಗಾಡಿ ಮೇಲೆ ಹತ್ತಿಸಿಕೊಂಡ. ಸೇತುವೆ ಕೆಳಗೆ ಇಬ್ಬರೂ ರೇಪ್ ಮಾಡಿದರು. ಬಳಿಕ ನನ್ನನ್ನು ಅಲ್ಲೇ ಬಿಟ್ಟು ಪರಾರಿಯಾದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.












Click it and Unblock the Notifications