ಫ್ಯಾಷನ್ ಐಕಾನ್ ಎಂದಿದ್ದಕ್ಕೆ ಖಾರವಾದ ಪಾಕ್ ಸಚಿವೆ ಹೀನಾ
ನವದೆಹಲಿ,
ಜು 31: ಭಾರತಕ್ಕೆ ಆಗಮಿಸಿದ್ದ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರು ತಮ್ಮನ್ನು ಫ್ಯಾಷನ್ ಬೆಡಗಿ ಎಂದು ಬಿಂಬಿಸುತ್ತಿರುವ ಭಾರತೀಯ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. id="toptextpromo">ಭಾರತದ
ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಲಾಹೋರ್ ಗೆ ಹಿಂತಿರುಗಿರುವ ಹೀನಾ ಅವರಿಗೆ ಭಾರತೀಯ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಕುರಿತು ಪ್ರಶ್ನೆಗೆ ಉತ್ತರಿಸಿದರು. ಈ ರೀತಿ ವರದಿಗಾರಿಕೆ ಎಲ್ಲೆಡೆ ಹೆಚ್ಚುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಇಸ್ಲಾಮಾಬಾದಿಗೆ ತೆರಳಿದರು. id='are-slot-1' class='oiad oi-axt oiadv'> id='top-searched-articles'>34
ವರ್ಷದ ಖಾರ್ ಅವರು ನವದೆಹಲಿಗೆ ಭೇಟಿಯನ್ನು ಸೆನ್ಸೇಷನಲ್ ನ್ಯೂಸ್ ರೀತಿಯಲ್ಲಿ ಭಾರತದ ಮಾಧ್ಯಮಗಳು ಬಿಂಬಿಸಿದೆ. ಭಾರತ ಹಾಗೂ ಪಾಕಿಸ್ತಾನ ಮಾತುಕತೆಗಿಂತ ಖಾರ್ ಅವರು ಧರಿಸಿದ್ದ ಮುತ್ತಿನ ಸರ, ಅವರ ಬಳಿ ಇರುವ ದುಬಾರಿ ವ್ಯಾನಿಟಿ ಬ್ಯಾಗ್, Roberto Cavalli ಸನ್ ಗ್ಲಾಸ್ ಗಳು, ಅವರ ಮಾತಿನ ಶೈಲಿ, ನಡಿಗೆ ಬಗ್ಗೆ ಹೆಚ್ಚಿನ ಗಮನ ಹರಿಸಿರುವ ಭಾರತದ ಮಾಧ್ಯಮಗಳು ಆಕೆಯನ್ನು ಫ್ಯಾಷನ್ ಲೋಕದ ರೂಪದರ್ಶಿ ಎಂದುಕೊಂಡಂತ್ತಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.











Click it and Unblock the Notifications