ಯಡಿಯೂರಪ್ಪ ಮುಖಸ್ತುತಿ ಮಾಡಿದ ಪಾಕ್ ಡಾನ್!
ಲಾಹೋರ್
ಜು 31: ಕರ್ನಾಟಕದ 'ಉಗ್ರ'ಪ್ರತಾಪಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ಈಗ ಲೋಕ ಪ್ರಸಿದ್ಧಿ ಪಡೆದಿದ್ದಾರೆ. ದೇಶದ ಗಡಿ ದಾಟಿರುವ ಅವರ ಅಪಕೀರ್ತಿಯನ್ನು ಪಾಕಿಸ್ತಾನದ ಡಾನ್ ಪತ್ರಿಕೆ ಸವಿವರವಾಗಿ ಪ್ರಕಟಿಸಿದೆ. id="toptextpromo">ಪಾಕಿಸ್ತಾನದ
ಪ್ರಸಿದ್ಧ ಪತ್ರಿಕೆ 'ದಿ ಡಾನ್' ವೆಬ್‌ಸೈಟಿನಲ್ಲಿ ಯಡಿಯೂರಪ್ಪ ಅವರ ರಾಜಕೀಯ ಬಿಕ್ಕಟ್ಟು ಎರಡನೇ ಪಮುಖ ಸುದ್ದಿಯಾಗಿದೆ. ಭಾರತದ ವಿರೋಧ ಪಕ್ಷ ಬಿಜೆಪಿ ತನ್ನ ಪಕ್ಷ ಆಳ್ವಿಕೆಯಲ್ಲಿರುವ ಮುಖ್ಯಮಂತ್ರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಕಾಲಾವಧಿಯಲ್ಲಿ ಸುಮಾರು 3.6 ಬಿಲಿಯನ್ ಡಾಲರ್ ನಷ್ಟು ಸಾರ್ವಜನಿಕ ಹಣ ಪೋಲಾಗಿದೆ ಎಂದು ಡಾನ್ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಕುರ್ಚಿಗೆ ಅಂಟಿಕೊಂಡಿದ್ದಾರೆ. ಅವರು ಬಿಜೆಪಿ ಹೈಕಮಾಂಡಿಗೆ ಬೆಲೆ ಕೊಟ್ಟಿಲ್ಲ. ಇದರಿಂದ ಕೇಂದ್ರದಲ್ಲಿ ಬಿಜೆಪಿ ಮುಖಭಂಗ ಅನುಭವಿಸುತ್ತಿದೆ. ಯಡಿಯೂರಪ್ಪ ಅವರ ಸರ್ಕಾರಿ ಜಮೀನನ್ನು ತನ್ನ ಕುಟುಂಬ ಸದಸ್ಯರು ಮತ್ತು ಇತರ ಆಪ್ತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. 2008ರಿಂದ ಈಚೆಗೆ ಅಕ್ರಮ ಅವ್ಯವಹಾರ ಮಿತಿ ಮೀರಿದೆ ಎಂದು ಪಾಕ್ ನ ಡಾನ್ ವಿವರಿಸಿದೆ.











Click it and Unblock the Notifications