ವೇಶ್ಯಾವಾಟಿಕೆಗೆ ತಳ್ಳುತಿದ್ದ 7 ಪಿಂಪ್‌ಗಳು ಪೊಲೀಸ್ ಬಲೆಗೆ
ಬೆಂಗಳೂರು,
ಜು.30: ಉತ್ತರ ಭಾರತದ ಯುವತಿಯರನ್ನು ನಗರಕ್ಕೆ ಕರತಂದು ಅವರನ್ನು ವೇಶ್ಯಾವಾಟಿಕೆ ನೂಕುತ್ತಿದ್ದ 7 ಮಂದಿ ಆರೋಪಿಗಳನ್ನು ಬಂಧಿಸಿ ಕಾಟನ್ ಪೇಟೆ ಪೊಲೀಸರು ನ್ಯಾಯಾಲದ ಕಟಕಟೆಗೆ ನೂಕಿದ್ದಾರೆ. ಇವರ ಸೆರೆಯಲ್ಲಿದ್ದ ಐದು ಮಂದಿ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. id="toptextpromo">ಆರೋಪಿಗಳು
ಕೊಲ್ಕತ್ತಾದಿಂದ ದಾನಿಯಾ, ರೇಖಾ, ಪ್ರಿಯಾ, ಸ್ವಾತಿ ಹಾಗೂ ಅಪ್ರಾಪ್ತ ಬಾಲಕಿಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆಗೆ ನೂಕಲು ಯತ್ನಿಸುತ್ತಿದ್ದರು. ಶ್ರೀನಿವಾಸ ಲಾಡ್ಜ್ ಮೇಲೆ ದಾಳಿ ಮಾಡಿದಾಗ ಇವರೆಲ್ಲಾ ಸಿಕ್ಕಿಬಿದ್ದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಾಗಮಂಗಲದ
ನಾಗರಾಜ, ಶಿವಲಿಂಗೇಗೌಡ, ಚನ್ನಪಟ್ಟಣದ ವಿನಯ್, ಗಜೇಂದ್ರ, ಕುಮಾರ್, ವಸಂತನಗರದ ರಾಜೇಶ್, ದಾವಣಗೆರೆಯ ರೇಣುಕಾ ಅಲಿಯಾಸ್ ದಿವ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ನಗದು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.











Click it and Unblock the Notifications